ಜಿಲ್ಲೆ

ತ್ಯಾಗ ಮನೋಭಾವದಿಂದ ಆನಂದ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಬದುಕಿನ ಉಲ್ಲಾಸ ಮತ್ತು ಉತ್ಸಾಹ ಇಮ್ಮಡಿಗೊಳಿಸುವ ಶಕ್ತಿ ಜಾತ್ರೆ, ಧಾರ್ಮಿಕ ಸಭೆ ಹಾಗೂ ಸಾಮಾಜಿಕ ಕಾರ್ಯಗಳಿಗಿದೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

ಅಳವಂಡಿಯ ಶ್ರೀ ಸಿದ್ಧೇಶ್ವರ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ, ಕಡುಬಿನ ಕಾಳಗ ಹಾಗೂ ಮದ್ದು ಸುಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಳವಂಡಿ ಭಕ್ತಿಯ ಸಂಗಮ. ಒಗ್ಗಟ್ಟಿನಿಂದ ಜಾತ್ರೆ ಆಚರಿಸುತ್ತಿದ್ದು, ಸಿದ್ಧೇಶ್ವರ ಸರ್ವರಿಗೂ ಆರೋಗ್ಯ, ಐಶ್ವರ್ಯ ಕರುಣಿಸಲಿ. ಮಳೆ, ಬೆಳೆ, ಸಮೃದ್ಧವಾಗಿ ಶಾಂತಿ ನೆಲೆಸಲಿ. ವರ್ಷಪೂರ್ತಿ ದುಡಿದು ದಣಿದ ದೇಹಗಳಿಗೆ ಸಮಾಧಾನ, ಉಲ್ಲಾಸ ದೊರೆಯಲಿ ಎಂದು ಆಶಿಸಿದರು. ನಂತರ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರನ್ನು ಕುಳ್ಳಿರಿಸಿ ಉತ್ಸವ ನಡೆಸಲಾಯಿತು. ಕಳಸ, ನಂದಿಕೋಲು, ಜನಪದ ವಾದ್ಯಗಳು ಪಾಲ್ಗೊಂಡಿದ್ದವು.