ಜಿಲ್ಲೆ

ರಾಜ್ಯಾದ್ಯಂತ ಜೋಳದ ಬೆಲೆ ಪಾತಾಳಕ್ಕೆ

Gadag - Shivanand Hiremath

ಶಿವಾನಂದ ಹಿರೇಮಠ ಗದಗ
ರಾಜ್ಯದಲ್ಲಿ ಜೋಳದ ಬೆಲೆ ಕುಸಿದಿದೆ. ಬೀರು ಬೇಸಿಗೆ ನಡುವೆ ಆಥಿರ್ಕ ಸಭಲತೆ ಕಾಣುವ ಉದ್ದೇಶ ಹೊಂದಿದ್ದ ರೈತರಿಗೆ ಬರದ ನಡುವೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶೇ. 40 ರಿಂದ ಶೇ. 50 ರಷ್ಟು ಬಿಳಿ ಜೋಳದ ಬೆಲೆ ಕುಸಿತ ಕಂಡಿದ್ದು, ರೈತ ವರ್ಗ ಮತ್ತೇ ಆಥಿರ್ಕ ಸಂಕಷ್ಟಕ್ಕೆ ಸಿಲುಕಿದೆ. ಡಿಸೆಂಬರ್​ 2023ರಲ್ಲಿ ಬಿಳಿ ಜೋಳ ಕ್ವಿಂಟಾಲ್​ಗೆ 7 ಸಾವಿರದಿಂದ 8000 ರೂಪಾಯಿ ಇತ್ತು. ದಶಕದಲ್ಲೇ ಅತ್ಯಧಿಕ ಬೆಲೆ ರೈತರಿಗೆ ಲಭಿಸಿತ್ತು. ಕಳೆದ ಹತ್ತು ದಿನಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಜೋಳದ ಬೆಲೆ ದಿಢೀರ್​ ಕುಸಿತ ಕಾಣುತ್ತಿದೆ. ಇದೀಗ 2500 ದಿಂದ 3500 ರೂ.ಗೆ ಕುಸಿತ ಕಂಡಿರುವ ಹಿನ್ನೆಲೆ ರೈತರಲ್ಲಿ ಮುಖದಲ್ಲಿ ಮಂದಹಾಸ ಮಾಯವಾಗಿದೆ. ಈ ನಡುವೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಜೊಳ ಬಿತ್ತನೆ ಕ್ಷೇತ್ರ ಕುಸಿಯುತ್ತಿರುವುದು ಇಲಾಖಾ ಅಧಿಕಾರಿಗಳ್ನು ಆತಂಕಕ್ಕೆ ದೂಡಿದೆ.
ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳೆ ಆಗಿರುವ ಬಿಳಿ ಜೋಳವು ಇಲ್ಲಿನ ಆಹಾರ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೊಪ್ಪಳ, ಹಾವೇರಿ, ಗದಗ, ಬೀದರ್​, ಗುಲರ್ಬಗಾ, ಬಿಜಾಪುರ, ಧಾರವಾಡ ಮತ್ತು ಇತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸಾಕಷ್ಟು ರೈತರು ಜೋಳದ ಕೃಷಿಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀೆಯಲ್ಲಿ ತೊಡಗಿದ್ದರು. ಆದರೆ, ಬಿಳಿಜೋಳ ಬೆಲೆ ಕುಸಿತದಿಂದ ಸಂಕಷ್ಟ ತಂದೊಡ್ಡಿದೆ. ಕೋವಿಡ್​, ತದನಂತರದ ಅತೀವೃಷ್ಟಿ, ಅನಾವೃಷ್ಟಿ ಹಿನ್ನೆಲೆ ಕೃಷಿ ಚಟುವಟಿಕೆಯಲ್ಲಿ ಅಂತಂತ್ರ ಸ್ಥಿತಿ ಎದುರಾಗುತ್ತಿರುವ ಹಿನ್ನೆಲೆ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ಜೋಳ ಬಿತ್ತನೆಗೆ ಆಸಕ್ತಿ ತೋರುತ್ತಿಲ್ಲ. ಗೋವಿನ ಜೊಳ, ಮೆಣಸಿನಕಾಯಿ ಸೇರಿದಂತೆ ಇತರೆ ವಾಣಿಜ್ಯ ಬೆಳೆ ಬಿತ್ತನೆಗೆ ಆಧ್ಯತೆ ನೀಡುತ್ತಿದ್ದಾರೆ. ಹೀಗಾಗಿ ಜೋಳ ಬಿತ್ತನೆ ಕ್ಷೇತ್ರ ಕುಸಿತ ಕಾಣುತ್ತಿದೆ ಎನ್ನಲಾಗಿದೆ.
ಬಿತ್ತನೆ ಕ್ಷೇತ್ರ ಕುಸಿತ:
ರಾಜ್ಯದಲ್ಲಿ 2019ರ ನಂತರ ಮಳೆಯಾಶ್ರಿತ ಪ್ರದೇಶದಲ್ಲಿ ಜೋಳ ಬಿತ್ತನೆ ಶೇ. 27.39 ರಷ್ಟು ಕುಸಿತ ಕಂಡಿದೆ. ಸರಾಸರಿ 60 ಸಾವಿರ ಹೆಕ್ಟೇರ್​ ನಿಂದ 20 ಸಾವಿರ ಹೆಕ್ಟೇರ್​ ವರೆಗೂ ಜಿಲ್ಲೆಗಳಲ್ಲಿ ಬಿತ್ತನೆ ಕ್ಷೇತ್ರ ಕುಸಿದೆ. ಸಕಾಲಕ್ಕೆ ಮಳೆ ಆಗದಿರುವುದು ಮತ್ತು ಅತೀವೃಷ್ಟಿ, ಅನಾವೃಷ್ಟಿ ಹಿನ್ನೆಲೆ ಬಿತ್ತನೆ ಕ್ಷೇತ್ರ ಕಡಿಮೆ ಆಗಿದೆ. ಕೋವಿಡ್​ ನಂತರವೇ ಬಿತ್ತನೆ ಕ್ಷೇತ್ರದ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ರಾಜ್ಯ ಕೃಷಿ ಇಲಾಖೆಯ ಪ್ರಕಾರ 2020& 21 ಸಾಲಿನಲ್ಲಿ 10.57 ಲಕ್ಷ ಹೆಕ್ಟೇರ್​ ಬಿತ್ತನೆ, 2021 & 22 ಸಾಲಿನಲ್ಲಿ 11 ಲಕ್ಷ ಹೆಕ್ಟೇರ್​, 2022&23 ನೇ ಸಾಲಿನಲ್ಲಿ 10.80 ಲಕ್ಷ ಹೆಕ್ಟೇರ್​ ಬಿತ್ತನೆ ಗುತಿ ಹೊಂದಿತ್ತು. ಆದರೆ, ಕ್ರಮವಾಗಿ 7.40 ಲಕ್ಷ ಹೆಕ್ಟೇರ್​, 7.29 ಹಾಗೂ 7.11 ಲಕ್ಷ ಹೆಕ್ಟೇರ್​ ಬಿತ್ತನೆ ಜರುಗಿದೆ.

ಕೋಟ್​:
ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎ್​ಎಕ್ಯೂ ಗುಣಮಟ್ಟದ ಜೋಳ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಮೇ.31 ರವರೆಗೆ ನೊಂದಣಿ ಕಾರ್ಯ ಕೆಗೊಳ್ಳಲಾಗುವುದು. ಪ್ರತಿ ಕ್ವಿಂಟಲ್​ಗೆ ಜೋಳ (ಹೈಬ್ರೀಡ್​)ಗೆ 3180 ರೂ. ಹಾಗೂ ಜೋಳ (ಮಾಲ್ಡಂಡಿ)ಗೆ 3225 ರೂ.ನಿಗದಿಪಡಿಸಲಾಗಿದೆ.
-ವೈಶಾಲಿ ಎಂ.ಎಲ್​., ಜಿಲ್ಲಾ-ಧಿಕಾರಿಗಳು, ಗದಗ

ಕೋಟ್​:
ನೈಸಗಿರ್ಕ ವಿಕೋಪಗಳು ಜೋಳ ಬಿತ್ತನೆ ಕ್ಷೇತ್ರದ ಮೇಲೆ ಪರಿಣಾಮ ಬೀರಿವೆ. ಪರ್ಯಾಯವಾಗಿ ಬಿತ್ತನೆಕ ಷೇತ್ರ ಹೆಚ್ಚಿಸಲು ಕೃಷಿ ಇಲಅಖೆಯು ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಧಿಕ ಲಾಭಾಂಶ ದೃಷ್ಟಿಯಿಂದ ರೈತರು ವಾಣಿಜ್ಯ ಬೆಳೆಗಳ ಬಿತ್ತನೆಗೆ ಆಸಕ್ತಿ ತೋರಿಸುತ್ತಿದ್ದಾರೆ.
-ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ,
ಕೃಷಿ ಇಲಾಖೆ ಬೆಳಗಾವಿ