ಜಿಲ್ಲೆ

ಪತ್ರಕರ್ತ ಪಾ.ಶ್ರೀ.ಅನಂತರಾಮ್​ಗೆ ಡಾ.ಎಚ್​.ನರಸಿಂಹಯ್ಯ ಪ್ರಶಸ್ತಿ

ಕೋಲಾರ ಡೆಸ್ಕ್

ಕೋಲಾರ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ನಿಂದ ಕೊಡಮಾಡುವ ಡಾ.ಎಚ್​. ನರಸಿಂಹಯ್ಯ ಪ್ರಶಸ್ತಿಗೆ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, ಹಲವು ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪ್ರಸ್ತುತ ಮನ್ವಂತರ ಪತ್ರಿಕೆ ಸಂಪಾದಕರೂ ಆಗಿರುವ ಪಾ.ಶ್ರೀ.ಅನಂತರಾಮ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ನ ಜಿಲ್ಲಾಧ್ಯಕ್ಷ ಲಕ್ಷಿ$್ಮ ನಾರಾಯಣ ತಿಳಿಸಿದ್ದಾರೆ.

ಬೆಂಗಳೂರಿನ ಯಲಹಂಕ ತಾಲೂಕಿನ ಉತ್ತರ ಜಿಲ್ಲೆಯ ಬಾಗಲೂರು ವಿಜೆ ಇಂಟರ್​ನ್ಯಾಷನಲ್​ ಶಾಲಾ ಮೈದಾನ ಆವರಣದಲ್ಲಿ ಡಿ.28 ಮತ್ತು 29 ರಂದು ಹಮ್ಮಿಕೊಂಡಿರುವ ರಾಜ್ಯಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಷ್ಟ್ರ ಕವಿ ಕುವೆಂಪು ಅವರ ಹುಟ್ಟು ಹಬ್ಬದಂದು ಸಮ್ಮೇಳನ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವರು ಸೇರಿ ಹಲವು ಗಣ್ಯರು ಭಾಗಹಿಸಲಿದ್ದಾರೆ ಎಂದು ತಿಳಿಸಿದರು.