ಜಿಲ್ಲೆ

ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ: ಅಧ್ಯಕ್ಷರಾಗಿ ಆರ್​. ಶ್ರೀಧರ್, ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಆಯ್ಕೆ

ಬೆಂಗಳೂರು: ಇಂದು (ಜುಲೈ 07) ನಡೆದ ನಗರದ ಪ್ರತಿಷ್ಠಿತ ʼಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರುʼ ಚುನಾವಣೆಯಲ್ಲಿ ಪತ್ರಕರ್ತರಾದ ಆರ್. ಶ್ರೀಧರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮೋಹನ್​ ಕುಮಾರ್​ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಕ್ಲಬ್​ನ ಅಧ್ಯಕ್ಷ ಸ್ಥಾನಕ್ಕಾಗಿ ಮೂವರು ಪತ್ರಕರ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಧ್ಯಾನ್‌ ಪೂಣಚ್ಚ, ಆರ್. ಶ್ರೀಧರ ಹಾಗೂ ಸುಭಾಷ್‌ ಹೂಗಾರ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಂತಿಮವಾಗಿ ಚುನಾವಣ ಫಲಿತಾಂಶದಲ್ಲಿ ಅತಿ ಹೆಚ್ಚು ಮತಗಳೊಂದಿಗೆ ಆರ್​. ಶ್ರೀಧರ್​ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ್‌ ಹೀರೇಮಠ್‌, ಬಿ.ಎನ್.ಮೋಹನ್‌ ಕುಮಾರ್‌ ಹಾಗೂ ವಿಶ್ವನಾಥ್‌ ಭಾಗವತ್‌ ಕಣದಲ್ಲಿದ್ದರು. ಅಂತಿಮವಾಗಿ ಮೋಹನ್​ ಕುಮಾರ್​ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಟಿ. ಮಂಜುನಾಥ್‌, ಎಂ.ಡಿ ಶಿವಕುಮಾರ್‌ ಬೆಳ್ಳಿತಟ್ಟೆ, ಹಾಗೂ ವೈ.ಎಸ್.ಎಲ್.‌ ಸ್ವಾಮಿ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಶಿವಕುಮಾರ್​ ಬೆಳ್ಳಿತಟ್ಟೆಯವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್​ನ 2024-25ನೇ ಸಾಲಿಗೆ ಚುನಾಯಿತರಾದವರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ...

* ಆರ್. ಶ್ರೀಧರ್- ಅಧ್ಯಕ್ಷರು

* ಮೋಹನ್ ಕುಮಾರ್- ಉಪಾಧ್ಯಕ್ಷರು

* ಶಿವಕುಮಾರ್ ಬೆಳ್ಳಿ ತಟ್ಟೆ- ಪ್ರಧಾನ ಕಾರ್ಯದರ್ಶಿ

* ಮಂಜುನಾಥ್ ಜಿ.ವೈ - ಕಾರ್ಯದರ್ಶಿ

* ಧರಣೀಶ್ ಬಿ.ಎನ್ - ಜಂಟಿ ಕಾರ್ಯದರ್ಶಿ

* ಗಣೇಶ್ ಜಿ - ಖಜಾಂಚಿ

ಕಾರ್ಯಕಾರಿ ಸಮಿತಿ

* ಶಿವಣ್ಣ

* ಯಾಸಿರ್ ಮುಸ್ತಾಕ್

* ಶರಣಬಸಪ್ಪ ಎ.ಎಚ್.

* ಮಮ್ತಾಜ್ ಅಲಿಮ್

* ರೋಹಿಣಿ ವಿ. ಅಡಿಗ

* ಸಿ.ಆರ್.ಮಂಜುನಾಥ್

ಮಹಿಳಾ ಮೀಸಲು ಕ್ಷೇತ್ರ

* ಮಿನಿ ತೇಜಸ್ವಿನಿ