ಹುಮನಾಬಾದ್: ಪತ್ರಿಕಾ ರಂಗ ತನ್ನದೆ ವೈಶಿಷ್ಟತೆ ಹೊಂದಿದ್ದು, ಅಭಿವೃದ್ಧಿ ಹಾಗೂ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಹಾಗೂ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗ ಪಾಟೀಲ್ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಠಾಳಕರ್ ಗೆಳೆಯರ ಬಳಗದಿಂದ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಜನ್ಮದಿನ ಮತ್ತು ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಪತ್ರಕರ್ತರು ಸಮಾಜ ಸುಧಾರಿಸುವ ಕೆಲಸ ಮಾಡಬೇಕು. ಧ್ವನಿ ಇಲ್ಲದವರ ಧ್ವನಿಯಾಗಬೇಕು ಎಂದರು.
ಹಲವು ಸಂಕಷ್ಟಗಳ ಮಧ್ಯೆ ಗ್ರಾಮೀಣ ಭಾಗದಲ್ಲಿನ ಪತ್ರಕರ್ತರು ನಿತ್ಯದ ಆಗು ಹೋಗುಗಳ ಹಾಗೂ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಮುಖಂಡರಾದ ಬಸವರಾಜ ಆರ್ಯ, ಸೋಮನಾಥ ಪಾಟೀಲ್, ನಾರಾಯಣ ರಾಂಪೂರೆ, ಪತ್ರಕರ್ತರಾದ ಸಂಜೀವಕುಮಾರ ಜುನ್ನಾ, ದುರ್ಯೋಧನ ಹೂಗಾರ, ಸಂಜಯ ದಂತಕಾಳೆ, ರಾಜು ಪೂಜಾರಿ, ಶಿವಶಂಕರ ತರನಳ್ಳಿ ಮಾತನಾಡಿದರು. ಎಲ್ಲ ಪತ್ರಕರ್ತರನ್ನು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ದಂಪತಿಯನ್ನು ಸನ್ಮಾನಿಸಲಾಯಿತು.
ಗೆಳೆಯರ ಬಳಗದ ಅಧ್ಯಕ್ಷ ಝರೆಪ್ಪ ಮಣಗೀರೆ, ಕಾರ್ಯದರ್ಶಿ ಸೂರ್ಯಕಾಂತ ಮಠಪತಿ, ಪ್ರಮುಖರಾದ ವಿಶ್ವನಾಥ ಪಾಟೀಲ್ ಮಾಡಗೋಳ, ಮಲ್ಲಿಕಾರ್ಜುನ ಪಾಟೀಲ್, ರಾಘು ಜಾಜಿ , ರಾಜೇಶ ಮಂಠಾಳಕರ್, ಡಿಸಿ ಬಿರಾದಾರ, ಕರಬಸಪ್ಪ ಬಿರಾದಾರ, ಪ್ರಭಾಕರ ನಾಗರಾಳೆ, ಗಿರೀಶ ತುಂಬಾ, ಜಗದೀಶ ಪಾಟೀಲ್, ರಮೇಶ ಕಲ್ಲೂರ್, ರಾಜು ಭಂಡಾರಿ, ರಾಜು ಸಲಗರ, ರವಿ ಹೊಸಳ್ಳಿ, ದಶರಥ ಗೋಖಲೆ ಇತರರಿದ್ದರು.