ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 21 ವರ್ಷ ಕಾಲ ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಸಹ ಉಪ ಕುಲಪತಿಯಾಗಿ ಡಾ. ಎಸ್.ಕೆ. ಜೋಶಿ ನೀಡಿದ ಕೊಡುಗೆ ಅನನ್ಯ. ಎಸ್ಡಿಎಂ ವೈದ್ಯಕಿಯ ಕಾಲೇಜಿನ ಬೆಳವಣಿಗೆಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಎಸ್ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ಎಸ್ಡಿಎಂ ವೈದ್ಯಕಿಯ ಕಾಲೇಜಿನ ಹಿರಿಯ ರೇಡಿಯಾಲಜಿ ಪ್ರಾಧ್ಯಾಪಕ, ವಿಶ್ವ ವಿದ್ಯಾಲಯದ ಸಹ ಉಪ ಕುಲಪತಿ ಡಾ. ಎಸ್.ಕೆ ಜೋಶಿ ಸೇವಾ ನಿವೃತ್ತಿ ನಿಮಿತ್ತ ಎಸ್ಡಿಎಂ ಕಾಲೇಜಿನಲ್ಲಿ ಇತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜೋಶಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಕೆ ಜೋಶಿ, 21 ವರ್ಷಗಳ ಸೇವೆಗೆ ಅನುವು ಮಾಡಿಕೊಟ್ಟ ಕುಲಪತಿ, ಉಪ ಕಲಪತಿ ಸೇರಿ ಎಲ್ಲ ಸಿಬ್ಬಂದಿಗೂ ಕೃತಜ್ಞತೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಹಿರಿಯ ಪ್ರಾಧ್ಯಾಪಕ ಡಾ. ನರೇಂದ್ರ ಶಾ ಮಾತನಾಡಿದರು. ಡಾ. ಎಸ್.ಕೆ ಜೋಶಿ ದಂಪತಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಎಸ್ಡಿಎಂ ವಿವಿ ಕಾರ್ಯ ನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿ ವಿ. ಜಿ. ಪ್ರಭು, ಎಸ್ಡಿಎಂ ವಿವಿ ಅಂಗ ಸಂಸ್ಥೆಗಳ ಮುಖ್ಯಸ್ಥರು, ವೈದ್ಯಕಿಯ ಅಧೀಕ್ಷಕರು, ಉಪ ವೈದ್ಯಕಿಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು, ವೈದ್ಯಕಿಯ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.