ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ ಪ್ರಲ್ಹಾದ ಜೋಶಿ, ಹುಬ್ಬಳ್ಳಿಯಲ್ಲಿ ವಿವಿಧ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿದರು.
ಧಾರವಾಡದಲ್ಲಿಯೂ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಹುಬ್ಬಳ್ಳಿಗೆ ಆಗಮಿಸಿದ ಪ್ರಲ್ಹಾದ ಜೋಶಿ, ಉಣಕಲ್ಲ ಸಿದ್ದಪ್ಪಜ್ಜನ ಮಠ, ಆರ್ಎಸ್ಎಸ್ ಕಾರ್ಯಾಲಯ ಕೇಶವಕುಂಜ, ಸಿದ್ಧಾರೂಢಮಠ, ಅರವಿಂದ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಬಿಜೆಪಿ ಕಚೇರಿಯಲ್ಲಿ ಮುತೆôದೆಯರು ಪ್ರಲ್ಹಾದ ಜೋಶಿ ಅವರೊಂದಿಗೆ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಅವರಿಗೂ ಆರತಿ ಬೆಳಗಿ ಸ್ವಾಗತಿಸಿದರು. ಕೇಶವ ಕುಂಜದಲ್ಲಿ ಆರ್ಎಸ್ಎಸ್ ಪ್ರಮುಖರಾದ ಸು. ರಾಮಣ್ಣ, ಗೋವಿಂದ ನರೇಗಲ್, ಸುರೇಶ ರಾವ್, ಗಿರೀಶ ಜಿ. ಹಾಗೂ ಮತ್ತಿತರರು ಪ್ರಲ್ಹಾದ ಜೋಶಿ ಅವರಿಗೆ ಸಿಹಿ ತಿನ್ನಿಸಿ, ಶುಭ ಹಾರೈಸಿದರು. ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಜೋಶಿ ಅವರನ್ನು ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವದಿಸಿದರು. ನಂತರ ನಾಗಶೆಟ್ಟಿಕೊಪ್ಪದ ಹನುಮಾನ ಮಂದಿರಕ್ಕೆ ಭೇಟಿ ನೀಡಿ, ಕೇಶ್ವಾಪುರದ ಮಯೂರಿ ಎಸ್ಟೇಟ್ನಲ್ಲಿರುವ ಮನೆಗೆ ಪ್ರಲ್ಹಾದ ಜೋಶಿ ತೆರಳಿದರು.