ಹುಬ್ಬಳ್ಳಿ: ದೇಶದಲ್ಲಿ ಪ್ರತಿಪಕ್ಷಗಳು ಮತ ಗಳಿಕೆಗಾಗಿ ಕೆಲವು ಸಮುದಾಯಗಳನ್ನು ಓಲೈಸುತ್ತಿವೆ, ರಾಷ್ಟ್ರದ ಭದ್ರತೆ ವಿಷಯದಲ್ಲೂ ಇವರಿಗೆ ಬದ್ಧತೆ ಇಲ್ಲ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ರಾಷ್ಟ್ರೀಯ ಭದ್ರತೆ ಖಾತ್ರಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಸಮಗ್ರ ಅಭಿವದ್ಧಿ ಬಗ್ಗೆ ಚಿಂತನ ಮಂಥನ ಮಾಡುತ್ತಿರುವ ಭಾರತೀಯ ಜನತಾ ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚೀನಾ ದೇಶಕ್ಕೆ ನಡುಕ ಹುಟ್ಟಿದೆ. ದೇಶದ ಬಲವನ್ನು ಪ್ರಪಂಚಕ್ಕೆ ಪರಿಚಯಿಸಿದ ಪ ಇದಾಗಿದೆ ಎಂದರು.
ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಲ್ಲಿ ನಂಬಿಕೆ ಇರಿಸಿದೆ. ಈಗಾಗಲೇ ದೇಶದಲ್ಲಿ 150 ವಿಮಾನ ನಿಲ್ದಾಣಗಳನ್ನು 10 ವರ್ಷದಲ್ಲಿ ಮಾಡಿದ್ದೇವೆ. ಹುಬ್ಬಳ್ಳಿ- ಧಾರವಾಡವನ್ನು ಸರ್ವಾಂಗೀಣ ಅಭಿವದ್ಧಿ ಮಾಡುವ ಮೂಲಕ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಎಲ್ಲ ಪ್ರಯತ್ನ ಮಾಡುವೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹುಬ್ಬಳ್ಳಿ ಧಾರವಾಡಕ್ಕೆ ಪ್ರಲ್ಹಾದ ಜೋಶಿಯವರ ಕೊಡುಗೆಗಳು ಅಪಾರ. ಮುಂದಿನ ಪೀಳಿಗೆ ಮತ್ತು ದೇಶದ ಬಲಿಷ್ಠತೆಗಾಗಿ ನಾವೆಲ್ಲ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಅಶೋಕ ಶೆಟ್ಟರ ಮಾತನಾಡಿ, ಹುಬ್ಬಳ್ಳಿ&ಧಾರವಾಡಕ್ಕೆ ಪ್ರಲ್ಹಾದ ಜೋಶಿಯವರಂಥ ಬಲಿಷ್ಠ ನಾಯಕರು ಸಿಕ್ಕಿರುವುದು ನಾಗರಿಕರ ಪುಣ್ಯ. ದೇಶದ ರಣೆಗಾಗಿ ನಾವು ಅವರನ್ನು ಮತ್ತೊಮ್ಮೆ ಸಂಸತ್ತಿಗೆ ಆಯ್ಕೆ ಮಾಡಬೇಕು. ಆ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿಸಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಒಗ್ಗಟ್ಟಿನಿಂದ ಪ್ರಚಾರ ಮಾಡಬೇಕಾಗಿದೆ ಎಂದು ಹೇಳಿದರು.
ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಂ.ವಿ. ಕರಮರಿ, ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಉಪಸ್ಥಿತರಿದ್ದರು. ಎಚ್.ಎನ್. ನಂದಕುಮಾರ ನಿರೂಪಿಸಿದರು.