ಜಿಲ್ಲೆ

ಅಂಧ ವಿದ್ಯಾರ್ಥಿಗೆ ವೀಸಾ ಕೊಡಿಸಿದ ಜೋಶಿ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರವಿನಗರದ ನಿವಾಸಿ, ಅಂಧ ವಿದ್ಯಾರ್ಥಿ ಸುಹಾಸ ಧಾರವಾಡ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವೀಸಾ ಕೊಡಿಸಿದ್ದಾರೆ.
ಇಟಲಿಯ ಟ್ರೇಂಟೋ ವಿಶ್ವವಿದ್ಯಾಲಯದ ಅರ್ಹತಾ ಪರೀಕ್ಷೆ ತೇರ್ಗಡೆಯಾಗಿದ್ದ ಸುಹಾಸ ಹೆಚ್ಚಿನ ವ್ಯಾಸಂಗಕ್ಕಾಗಿ ಇಟಲಿಗೆ ಹೊಡಲು ಸಿದ್ಧನಾಗಿದ್ದ. ಆದರೆ, ಇಟಲಿ ರಾಯಭಾರಿ ಕಚೇರಿಯಿಂದ ವೀಸಾ ಅರ್ಜಿ ತಿರಸ್ಕೃತಗೊಂಡಿತ್ತು. ಇದನ್ನು ಸುಹಾಸ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು. ಆಗ ಪ್ರಲ್ಹಾದ ಜೋಶಿ, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರೊಂದಿಗೆ ಸಮಾಲೋಚನೆ ನಡೆಸಿ ವೀಸಾ ಕೊಡಿಸಿದ್ದಾರೆ. ವೀಸಾ ಸಿಕ್ಕಿದ್ದರಿಂದ ಸುಹಾಸನ ತಂದೆ-ತಾಯಿ ಜೋಶಿ ಅವರನ್ನು ಅಭಿನಂದಿಸಿ ಖುಷಿ ವ್ಯಕ್ತಪಡಿಸಿದ್ದಾರೆ.