ಹುಬ್ಬಳ್ಳಿ: ಸವಿತಾ ಸಮಾಜಕ್ಕೆ ಭಾರತೀಯ ಜನತಾ ಪವು ರಾಜಕೀಯ ಪ್ರಾತಿನಿಧ್ಯ ನೀಡಲಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸವಿತಾ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಪದಲ್ಲಿ ಸಮಾಜದ ಹಲವರು ಪದಾಧಿಕಾರಿಗಳಾಗಿದ್ದಾರೆ, ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಮಾಜದ ಮುಖಂಡರಿಗೆ ಪದ ವತಿಯಿಂದ ಟಿಕೆಟ್ ನೀಡಲಾಗುವುದು ಎಂದರು.
ಸವಿತಾ ಸಮಾಜದ ಮುಖಂಡರು, ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಾಣ
ಮಾಡಿಕೊಡಬೇಕು, ಕುಲದೇವಿ ದರ್ಶನಕ್ಕೆ ಹೋಗುವ ಭಕ್ತರಿಗಾಗಿ ಹುಬ್ಬಳ್ಳಿಯಿಂದ ತೆಲಂಗಾಣದಲ್ಲಿರುವ ಗದ್ವಾಲ್ ಪಟ್ಟಣಕ್ಕೆ ರೈಲು ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ
ಮಾಡಿದರು.
ಬುಚ್ಚಣ್ಣ ಮುಷ್ಠಿಪಲ್ಲಿ, ಮೋಹನ ಗೋಲಿ, ಮೂಸಣ್ಣ ಅಮರಚಿಂತಾ, ಮಂಜುನಾಥ ಬಿಜವಾಡ, ಇತರರು ಉಪಸ್ಥಿತರಿದ್ದರು.
ಸವಿತಾ ಸಮಾಜದ ಜಿಲ್ಲಾಧ್ಯ ಕೃಷ್ಣಾ ಉಪ್ಪೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರುನಾಥ ನಾರಾಯಣದಾಸ ವಂದಿಸಿದರು.