ಬೆಂಗಳೂರು: ರಾಜಾಜಿನಗರದ ಒಂದನೇ ಹಂತದಲ್ಲಿ ನೂತನ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಾರಾಟ ಮಳಿಗೆ ಶನಿವಾರ ಆರಂಭವಾಗಿದೆ. ನಟಿ ಅಂಕಿತಾ ಅಮರ್ ಉದ್ಘಾಟಿಸಿದರು.
ಮಳಿಗೆ ಲೋಕಾರ್ಪಣೆ ಹಿನ್ನೆಲೆ ಅ. 30ರವರೆಗೆ ವಿವಿಧ ಚಿನ್ನಾಭರಣಗಳ ಖರೀದಿ ಮೇಲೆ ಆಕರ್ಷಕ ಕೊಡುಗೆ ದೊರೆಯಲಿದೆ. 60 ಸಾವಿರ ರೂ. ಮೌಲ್ಯದ ಚಿನ್ನ ಅಥವಾ ವಜ್ರದ ಆಭರಣ ಖರೀದಿಸಿದರೆ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ಸಿಗಲಿದೆ. ವಜ್ರಗಳ ಮೇಲೆ ಶೇ.20 ಮತ್ತು ಪ್ಲಾಟಿನಂ ಆಭರಣ ಮೇಲೆ ಶೇ.7 ರಿಯಾಯಿತಿ ಲಾಭ ಪಡೆಯಬಹುದು. ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಕಾರು ಗೆಲ್ಲುವ ಅವಕಾಶವಿದೆ.
ಜೋಸ್ ಆಲುಕ್ಕಾಸ್ ಸಂಸ್ಥೆ ಅಧ್ಯಕ್ಷ ಜೋಸ್ ಆಲುಕ್ಕಾಸ್ ಮಾತನಾಡಿ, ಸಂಸ್ಥೆಯಿಂದ 60ನೇ ವಾರ್ಷಿಕೋತ್ಸವ ಆಚರಣೆ ಸಂಭ್ರಮದ ಹೊಸ್ತಿನಲ್ಲಿ ರಾಜಾಜಿನಗರದಲ್ಲಿ ಸುಸಜ್ಜಿತ ಜುವೆಲ್ಲರಿ ಮಳಿಗೆ ತೆರೆಯಲಾಗಿದೆ. ವಿಶಾಲವಾದ ಮಳಿಗೆಯಲ್ಲಿ ನೂರಾರು ವಿನ್ಯಾಸದ ಚಿನ್ನಾಭರಣ ಸಂಗ್ರಹಿಸಲಾಗಿದೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಆಭರಣಗಳು ದೊರೆಯಲಿವೆ. ಆಕರ್ಷಕ ಕೊಡುಗೆಗಳನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಳೆಯ ಚಿನ್ನಾಭರಣಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ಇದೆ. ಮದುವೆ ಸೇರಿ ಶುಭ ಸಮಾರಂಭಗಳಿಗೆ ಚಿನ್ನದ ಖರೀದಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಪ್ರತಿ ಖರೀದಿಯೊಂದಿಗೆ ವಿಶೇಷ ಉಡುಗೊರೆ ನೀಡಲಾಗುತ್ತದೆ ಎಂದರು. ಜಯಕರ್ನಾಟಕ ಸಂಟನೆ ಅಧ್ಯಕ್ಷ ಬಿ.ಎನ್. ಜಗದೀಶ್, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಆಲುಕ್ಕಾಸ್, ಪೌಲ್ ಜೆ. ಆಲುಕ್ಕಾಸ್, ಜಾನ್ ಆಲುಕ್ಕಾಸ್ ಮತ್ತಿತರರಿದ್ದರು.
ಚಿನ್ನಾಭರಣಗಳ ಮೇಲೆ ನಾವು ಭಾವನಾತ್ಮಕ ಸಂಬಂಧ ಹೊಂದಿರುತ್ತೇವೆ. ಚಿನ್ನದಿಂದ ಜೀವನ ಉಜ್ವಲವಾಗುವ ಜತೆಗೆ ಕಷ್ಟಕಾಲದಲ್ಲೂ ಸಹಾಯಕ್ಕೆ ಬರುತ್ತದೆ. ಜೋಸ್ ಆಲುಕ್ಕಾಸ್ ಮಳಿಗೆಯಲ್ಲಿ ಕಣ್ಮನ ಸೆಳೆಯುವ ಚಿನ್ನ, ಬೆಳ್ಳಿ, ವಜ್ರಾಭರಣಗಳ ಸಂಗ್ರಹವಿದೆ. ಬರುವ ದಿನಗಳಲ್ಲಿ ಸಂಸ್ಥೆಯವರು ಇನ್ನಷ್ಟು ಮಳಿಗೆ ತೆರೆಯುವಂತಾಗಲಿ.
| ಅಂಕಿತಾ ಅಮರ್, ನಟಿ