ಜಿಲ್ಲೆ

ಜೊಲ್ಲೆ ಗ್ರೂಪ್‌ನಿಂದ ಜೀವನಮಟ್ಟ ಸುಧಾರಣೆ

ಚಿಕ್ಕೋಡಿ ಗ್ರಾಮೀಣ: ಪರಿಸರ ಕಾಳಜಿಗಾಗಿ ಸೌರಶಕ್ತಿ ಬೆಳೆಸಬೇಕು. ಅದರಿಂದ ಬೇಕಾದಷ್ಟು ವಿದ್ಯುತ್ ಉತ್ಪಾದಿಸಬಹುದು ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯಿಂದ ನಿರ್ಮಿಸಿದ 270 ಕಿಲೋ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೊಲ್ಲೆ ಗ್ರೂಪ್ ವಿವಿಧ ಸಂಸ್ಥೆಗಳ ಮೂಲಕ ರೈತರಿಗೆ, ಬಡಮಕ್ಕಳಿಗೆ, ಗ್ರಾಹಕರಿಗೆ, ಸದಸ್ಯರಿಗೆ, ಮಹಿಳೆಯರಿಗೆ ವಿನೂತನ ಯೋಜನೆಗಳನ್ನು ಜಾರಿ ತರುವ ಮೂಲಕ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿದೆ. ಜನಸೇವೆಯಲ್ಲೂ ಸಹಕಾರಿ ಮುನ್ನಡೆ ಸಾಧಿಸಿದೆ ಎಂದರು.

270 ಕಿಲೋ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಉದ್ಘಾಟಿಸಿದರು.

ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಸಿನ್ ತಾಂಬೋಳೆ, ವಿಭಾವರಿ ಖಾಂಡಕೆ, ಅಣ್ಣಾಸಾಹೇಬ ಚೌಗಲಾ, ರಿಷಭ ಜೈನ, ವಜ್ರಕಾಂತ ಸದಲಗೆ, ಪ್ರಕಾಶ ಪಾಟೀಲ, ನಿಂಗಪ್ಪ ಖೋಕಲೆ, ಕಾಶಿನಾಥ ಕಮತೆ, ದತ್ತಾತ್ರೇಯ ಪಾಟೀಲ, ಬಾಳಾಸಾಹೇಬ ಕದಮ, ಮಲ್ಲಿಕಾರ್ಜುನ ತೇಲಿ, ಸದಾನಂದ ಹಳಿಂಗಳಿ, ಜಯಪ್ರಕಾಶ ಸಾವಂತ, ಚೇತನ ದೇಶಪಾಂಡೆ, ಶ್ರೀನಿವಾಸ ಕರಾಳೆ, ಶ್ರೀಪಾದ ನೇರ್ಲಿಕರ, ಸಹಕಾರಿ ವ್ಯವಸ್ಥಾಪಕ ಅಧಿಕಾರಿಗಳಾದ ಬಿ.ಎ.ಗುರುವ, ಎಂ.ಕೆ.ಮಂಗಾವತೆ, ಆರ್.ಜಿ.ಕುಂಬಾರ, ಎಸ್.ಕೆ.ಮಾನೆ, ಎಸ್.ಎಂ.ಡಬ್ಬ ಇತರರು ಇದ್ದರು.