ಜಿಲ್ಲೆ

ಜೋಕಾಲಿ ಆಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

Haveri - Kariyappa Aralikatti

ರಾಣೆಬೆನ್ನೂರ: ಸೀರೆಯಿಂದ ಕಟ್ಟಿದ್ದ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಅದೇ ಸೀರೆ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ಸೋಮವಾರ ನಡೆದಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ರಾಹುಲ ಮಲ್ಲಿಕಾರ್ಜುನ ಬಾವಿಹಳ್ಳಿ (16) ಮೃತ ಬಾಲಕ.

ಈತ ಶಾಲೆ ರಜೆ ಹಿನ್ನೆಲೆಯಲ್ಲಿ ಕೂನಬೇವು ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದ. ಈ ಸಮಯದಲ್ಲಿ ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.