ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಮತ್ತಿತರರು ಇದ್ದರು.  
ಜಿಲ್ಲೆ

ಮಳೆ, ಬೆಳೆ ಹಾನಿಗೆ ಜಂಟಿ ಸಮೀಕ್ಷೆ

ಎನ್.ವೆಂಕಟೇಶ್

ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮಂಗಳವಾರ ಕರೆದಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾಮಟ್ಟದ ಸಭೆಯಲ್ಲಿ ಮಳೆ ಹಾನಿ, ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಜಲಮೂಲಗಳ ಬಳಿ ಸುರಕ್ಷತಾ ಕ್ರಮ, ಶಿಥಿಲಾವಸ್ಥೆಯಲ್ಲಿನ ಮನೆಗಳ ಪತ್ತೆ, ಪರ್ಯಾಯ ವ್ಯವಸ್ಥೆ ಸೇರಿ ಪರಿಹಾರ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.

ಜಿಲ್ಲೆಯಲ್ಲಿ 361 ಡೆಂಘೆ ಪ್ರಕರಣಗಳು ದಾಖಲಾಗಿದ್ದು, ಕಳೆದ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, ಇತ್ತೀಚೆಗೆ ನಿತ್ಯ ಮಳೆ ಸುರಿಯುತ್ತಿರುವುದರಿಂದ ಮತ್ತೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಸೂಚಿಸಿದರು.

ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಂಟಿ ಕಷಿ ನಿರ್ದೇಶಕಿ ಜಾವೀದಾ ನಸೀವಾ ಖಾನಂ ಮತ್ತಿತರರು ಇದ್ದರು.

42.88 ಹೆಕ್ಟೇರ್ ಬೆಳೆ ನಷ್ಟ

ಮಳೆ ಹಾನಿಯಿಂದ (ಅ.1 ರಿಂದ ಅ.21 ರವರೆಗೆ) 42.88 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಮಳೆಗೆ ಹಾನಿಯಾಗಿರುವ ಬೆಳೆ ವಾಹಿತಿಯ ವರದಿಯನ್ನು ತ್ವರಿತವಾಗಿ ಕಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ.

ಮನೆ ಹಾನಿ (ಅ.1 ರಿಂದ ಇಲ್ಲಿಯವರೆಗೆ)ತಾಲೂಕು ಹಾನಿಯಾದ ಮನೆಗಳು ಪರಿಹಾರ ಪಡೆದ ಸಂತ್ರಸ್ತರುಗೌರಿಬಿದನೂರು 15-  5ಚಿಕ್ಕಬಳ್ಳಾಪುರ 10 - 5ಬಾಗೇಪಲ್ಲಿ 8 -5ಚಿಂತಾಮಣಿ 4 -ಚೇಳೂರು 4 -ಶಿಡ್ಲಟ್ಟ 4 -ಗುಡಿಬಂಡೆ 12  - 7