ಜಿಲ್ಲೆ

ಉಳ್ಳೂರಿನ ಶಾಲೆಯಲ್ಲಿ ಜಂಟಿ ವಾರ್ಷಿಕೋತ್ಸವ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಉಳ್ಳೂರು ಕಂದಾವರದ ಉಡುಪಿ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘದ ಜಂಟಿ ವಾರ್ಷಿಕೋತ್ಸವ ಶಾಲಾವರಣದಲ್ಲಿ ಶನಿವಾರ ನಡೆಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಬಿ ಧ್ವಜಾರೋಹಣಗೈಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳೂರು ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಸುಬ್ರಾಯ ಉಡುಪ ಶುಭಾಂಶಸನೆಗೈದರು. ಹಳೇ ವಿದ್ಯಾರ್ಥಿ ಡಾ.ಸುರೇಶ ಅಡಿಗ ಸ್ವಸ್ತಿವಾಚನಗೈದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಡಿಗ, ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ಶಿಕ್ಷಣ ಇಲಾಖೆಯ ಗಣೇಶ ಕುಮಾರ್ ಶೆಟ್ಟಿ ಶುಭಹಾರೈಸಿದರು. ಗ್ರಾಪಂ ಸದಸ್ಯ ರಾಮಚಂದ್ರ ಶೇರೆಗಾರ್, ಉದ್ಯಮಿ ರವೀಂದ್ರ ಶೇರೆಗಾರ್, ಶಿಕ್ಷಣ ಇಲಾಖೆಯ ಸಂತೋಷ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಉಷಾ ಸ್ವಾಗತಿಸಿದರು. ವಿದ್ಯಾಧರ ಪುಷ್ಕರ್ ವರದಿ ವಾಚಿಸಿದರು. ಅತಿಥಿ ಶಿಕ್ಷಕಿ ಸುಪ್ರೀತಾ ಮತ್ತು ರಕ್ಷಿತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೂಪಾ ಸಹಕರಿಸಿದರು.

ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಜಯಶ್ರೀ ಶೆಟ್ಟಿ, ರವೀಂದ್ರ ದೇವಾಡಿಗ, ಎಸ್‌ಡಿಎಂಸಿ ಉಪಾಧ್ಯಕ್ಷ ಸತೀಶ್ವಂದ್ರ ಶೇರೆಗಾರ್, ಸುಮನಾ ಎಸ್., ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ದಾನಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ನಿವೃತ್ತ ಅಂಗನವಾಡಿ ಶಿಕ್ಷಕಿ ಇಂದಿರಾ, ವಾಲಿಬಾಲ್ ಆಟಗಾರ ವಿವೇಕ ಅವರನ್ನು ಸನ್ಮಾನಿಸಲಾಯಿತು. ಭೂಸೇನೆಯ ಹವಾಲ್ದಾರ್ ರಾಜಶೇಖರ ಶೇರೆಗಾರ್, ಅಧ್ಯಾಪಕ ಡಾ.ಗಿರೀಶ ಶೆಟ್ಟಿ ಅವರನ್ನು ಗೌರವಿಸಲಾಯಿತು.