ಜಿಲ್ಲೆ

ಸೇನೆಗೆ ಸೇರಲು ಪ್ರರಿಶ್ರಮ, ಹುಮ್ಮಸ್ಸು ಅಗತ್ಯ

ಕುಂದಾಪುರ: ಶಾಲಾ ಜೀವನದಲ್ಲಿ ಶಿಕ್ಷಕರೋರ್ವರ ‘ಏಳಿ ಎದ್ದೇಳಿ ವೀರ ಯೋಧರೆ’ಎಂಬ ಹಾಡು ಇಂದು ನನ್ನನ್ನು ಇಲ್ಲಿಯವರೆಗೆ ತಲುಪಿಸಿದೆ. ಸೇನೆಯಲ್ಲಿ ಕೆಲಸ ವಾಡಲು ಪರಿಶ್ರಮ ಎಷ್ಟು ಅಗತ್ಯವಿತ್ತೋ ಸೇನೆಗೆ ಸೇರಲು ಹುಮ್ಮಸ್ಸು ಅದಕ್ಕಿಂತ ಹೆಚ್ಚು ಅಗತ್ಯವಿರುತ್ತದೆ. ದೇಶ ಕಾಯುವುದು ಕೇವಲ ಯೋಧರ ಕೆಲಸವಲ್ಲ, ಬದಲಾಗಿ ಎಲ್ಲರ ಕೆಲಸ ಎಂದು ಸಿಆರ್‌ಪಿಎಫ್ ಯೋಧ ಬಸ್ರೂರಿನ ದೀಪಕ್ ಕುವಾರ್ ಅಭಿಪ್ರಾಯಪಟ್ಟರು.

ಬಸ್ರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಸ್ರೂರಿನ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಆವರಣದಲ್ಲಿ ನಡೆದ ‘ತ್ರಿವಳಿ ವಿಜಯಾಚರಣೆ ಮತ್ತು ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ವಾತನಾಡಿದರು.

ಕೋಟ ಪಡುಕೆರೆಯ ಪ್ರಾಧ್ಯಾಪಕ ಡಾ. ರಮೇಶ್ ಆಚಾರ್ಯ, ನಿವೃತ್ತ ಯೋಧ ಎಂ.ಕೆ.ಶೆಟ್ಟಿ ವಾತನಾಡಿದರು. ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯ ಹಳ್ನಾಡು ದೇವಾನಂದ ಶೆಟ್ಟಿ ಉದ್ಘಾಟಿಸಿದರು. ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಕಾರ್ಗಿಲ್, ಪುಲ್ವಾವಾ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ದೀಪಕ್ ಕುವಾರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಯೋಧ ಬಸ್ರೂರಿನ ಗಣಪತಿ ಖಾರ್ವಿ, ಬಸ್ರೂರು ನೇಕಾರರ ಸೊಸೈಟಿ ನಿರ್ದೇಶಕ ರಾಜೇಂದ್ರ ಶೆಟ್ಟಿಗಾರ್, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಶೀನ ಪೂಜಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂದಾಪುರ ಟಕ ಅಧ್ಯಕ್ಷ ಉಮೆಶ್ ಶೆಟ್ಟಿ ಶಾನ್ಕಟ್ಟು, ಉದ್ಯಮಿ ಹರ್ಷವರ್ದನ್ ಶೆಟ್ಟಿ, ಕ್ಲಬ್‌ನ ಉಪಾಧ್ಯಕ್ಷ ಶಾಹುಲ್ ಹಮೀದ್, ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅಶೋಕ್ ಕೆರೆಕಟ್ಟೆ ಸ್ವಾಗತಿಸಿ, ರಾಜೇಶ್ ಬಸ್ರೂರು ವಂದಿಸಿದರು. ಸಾರಿಕಾ ಅಶೋಕ್ ನಿರೂಪಿಸಿದರು.