ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸಮ್ಮುಖದಲ್ಲಿ ಜೆಡಿಎಸ್‌ಗೆ ಶುಕ್ರವಾರ ಸೇರ್ಪಡೆಯಾದರು.
ಗ್ರಾಪಂ ಸದಸ್ಯೆ ಸುಧಾ, ಮುಖಂಡರಾದ ನಾರಾಯಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಹೇಮಂತ್ ಕುಮಾರ್, ಮೋಹನ್, ತಿರುಪಾಲ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಜೆ.ಡಿ.ಎಸ್. ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಹೇಮಂತ್‌ಕುಮಾರ್ ಮಾತನಾಡಿ, ನಾನು ಈ ಹಿಂದೆ ಜೆಡಿಎಸ್‌ನಲ್ಲಿದ್ದೆ. ಬಡಜನತೆಗೆ ನೀಡಿದ್ದ ಹಕ್ಕು ಪತ್ರಗಳ ಖಾತೆ ಮಾಡದೆ ಹಾಲಿ ಶಾಸಕರು ನಿರ್ಲಕ್ಷೃ ಮಾಡಿದ್ದರು. ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ ಎಂದು ಮನವಿ ಮಾಡಿದರೂ ಸ್ಪಂದನೆ ಮಾಡುತ್ತಿಲ್ಲ. ಇವರ ನಡೆಗೆ ಬೇಸತ್ತು ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿರುವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಪಾಪಣ್ಣ, ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್, ನರಸಿಂಹ, ಸದಸ್ಯರಾದ ಮಂಜುನಾಥ್.ಸಿ, ರಾಜು.ಕೆ, ಮುಂಡರಾದ ಮಹದೇವು, ರಾಜು.ಪಿ, ಆನಂದ, ರವಿನಾರಾಯಣ, ಯೋಗೇಶ್, ಹರೀಶ್ ಇದ್ದರು.