ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಂತೋಷ ಹೊಕ್ರಾಣಿ, ಮಲ್ಲಿಕಾರ್ಜುನ ಚರಂತಿಮಠ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡರು. ಸಚಿವ ಶಿವಾನಂದ ಪಾಟೀಲ, ಶಾಸಕ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ ್ಯನಮಠ, ಮಾಜಿ ಸಚಿವರಾದ ಎಸ್. ಆರ್.ಪಾಟೀಲ, ಅಜಯಕುಮಾರ ಸರನಾಯಕ, ಮುಖಂಡರಾದ ಅಶೋಕ ಲಾಗಲೋಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಎಸ್.ಎನ್. ರಾಂಪೂರ, ನಾಗರಾಜ್ ಹದ್ಲಿ ಇತರರು ಇದ್ದರು.  
ಜಿಲ್ಲೆ

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ದತ್ತಾತ್ರೇಯ ಪಿ ಕುಲಕರ್ಣಿ


ಬಾಗಲಕೋಟೆ: ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ ಹಾಗೂ ಸಂತೋಷ ಹೊಕ್ರಾಣಿ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಉಭಯ ಮುಖಂಡರ ನಗರ ಹಾಗೂ ಗ್ರಾಮೀಣ ಭಾಗದ ಬೆಂಬಲಿಗರು ಹಾಗೂ ಅಭಿಮಾನಿಗಳು ಕೈ ಧ್ವಜ ಹಿಡಿದರು. ಅಮೀನಗಡ ಪಟ್ಟಣ ಪಂಚಾಯಿತಿ ಪಕ್ಷೇತರ ಸದಸ್ಯ ಗಣೇಶ ಚಿತ್ರಗಾರ, ಬಸಪ್ಪ ಸ್ವಾಗಿ, ಸಂಜು ಡಿಗ್ಗಿ, ಗುರು ಅನಗವಾಡಿ, ಪ್ರಶಾಂತ ಸನಕನಾಳ, ಬಸವರಾಜ ಕಳಸಾ, ಈರಣ್ಣ ಲಮಾಣಿ, ಶಿವನಗೌಡ ಗೌಡರ, ಮಲ್ಲಿಕಾಜು ನರ್ ಗಣಾಚಾರಿ, ಸಾಗರ ಚವ್ಹಾಣ್, ಯಶವಂತ ಅನಂತಪೂರ, ಬಸವರಾಜ ನೀಲನಾಯಕ, ರಾಘು ಯಾದಗಿರಿ, ಪ್ರಶಾಂತ ಮಾಚಕನೂರ, ಮಲ್ಲು ಮಾಚಕನೂರ, ವಿಜಯ ಚವ್ಹಾಣ್ ಸೇರಿ ನೂರಾರು ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡರು.

ಸಚಿವ ಶಿವಾನಂದ ಪಾಟೀಲ, ಶಾಸಕ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ ್ಯನಮಠ, ಮಾಜಿ ಸಚಿವರಾದ ಎಸ್. ಆರ್.ಪಾಟೀಲ, ಅಜಯಕುಮಾರ ಸರನಾಯಕ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಅಶೋಕ ಲಾಗಲೋಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಎಸ್.ಎನ್. ರಾಂಪೂರ, ನಾಗರಾಜ್ ಹದ್ಲಿ, ದುಂಡಪ್ಪ ಏಳಮ್ಮಿ, ರಜಾಕ ಬೆನ್ನೂರ ಅನೇಕರು ಇದ್ದರು.