ವಿಜಯಪುರ: ಗಡಿಯಲ್ಲಿ ಸೈನಿಕರು ದೇಶವನ್ನು ಸಂರಸಿದಂತೆ ವಿದ್ಯಾರ್ಥಿಗಳು ಎನ್ಎಸ್ಎಸ್ ಸೇರಿ ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದು ವಿಜಯಪುರ ತಾಲೂಕು ಎನ್ಎಸ್ಎಸ್ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಕಪಾಲಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಎಸ್ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಟಕ&1 ಮತ್ತು ಟಕ&2 ಸಂಯೋಜನೆಯಡಿ ತಾಲೂಕಿನ ಹಂಚನಾಳ ಪಿಎಚ್ ಗ್ರಾಮದಲ್ಲಿ ವಾರಗಳ ಕಾಲ ಹಮ್ಮಿಕೊಂಡ ಎನ್ಎಸ್ಎಸ್ ಶಿಬಿರಕ್ಕೆ ಭಾನುವಾರ ಅವರು ಚಾಲನೆ ನೀಡಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು. ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕೇವಲ ಸ್ವಚ್ಛತೆ ಅಲ್ಲದೆ ಶಿಸ್ತು, ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಮೌಲ್ಯ ಅರ್ಥೈಸಿಕೊಳ್ಳಲು ಸಹಾಯ ಮಾಡಲಿವೆ ಎಂದರು.
ಪ್ರಾಚಾಯೆರ್ ಡಾ. ಆರ್.ಎಂ. ಮಿರ್ದೆ ಮಾತನಾಡಿ, ವಿದ್ಯಾರ್ಥಿಗಳು 7 ದಿನಗಳ ವಿಶೇಷ ಶಿಬಿರದ ಮಹತ್ವ ಅರಿತುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಶಿಬಿರಗಳು ತುಂಬಾ ಸಹಾಯಕಾರಿಯಾಗಿವೆ ಎಂದರು.
ಉಪ ಪ್ರಾಚಾರ್ಯ ಡಾ. ಅನಿಲ ನಾಯಕ ಎನ್ಎಸ್ಎಸ್ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಕೆ.ಜಿ. ಲಮಾಣಿ ಸ್ವಚ್ಛತೆ ಮತ್ತು ಮೊಬೈಲ್ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಮಹಾವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್. ಪಾಟೀಲ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಮಿಲನ ರಾಠೋಡ, ಡಾ. ತರನ್ನುಮ ಜಬೀನಖಾನ ಮತ್ತಿತರರಿದ್ದರು.