ಎನ್.ಆರ್.ಪುರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸೀನಿಯರ್ ಛೇಂಬರ್ ಸಂಸ್ಥೆಯಿಂದ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಕೆ.ಆರ್.ನಾಗರಾಜ್ ಪುರಾಣಿಕ್, ರಾಜೇಶ್ವರಿ, ಎಚ್.ಆರ್.ದಿನೇಶ್, ಎಸ್.ಎಸ್.ಜಗದೀಶ್ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸಿ

ಎನ್.ಆರ್.ಪುರ: ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಸೀನಿಯರ್ ಛೇಂಬರ್ ಅಧ್ಯಕ್ಷ ಕೆ.ಆರ್.ನಾಗರಾಜ ಪುರಾಣಿಕ್ ತಿಳಿಸಿದರು.

ಸೋಮವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ಮಕ್ಕಳಿಗೆ ಸೀನಿಯರ್ ಛೇಂಬರ್ ಸಂಸ್ಥೆಯಿಂದ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ಬರಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸೀನಿಯರ್ ಛೇಂಬರ್‌ನಿಂದ ಹಲವು ಕಾರ್ಯಕ್ರಮ ನಡೆಸಲಾಗುವುದು ಎಂದರು. ಮುಖ್ಯಶಿಕ್ಷಕಿ ರಾಜೇಶ್ವರಿ, ಸೀನಿಯರ್ ಛೇಂಬರ್ ಕಾರ್ಯದರ್ಶಿ ಪಿ.ಎಸ್.ವಿದ್ಯಾ ನಂದಕುಮಾರ್, ಎಚ್.ಆರ್.ದಿನೇಶ್. ಎಚ್.ಬಿ.ರಘುವೀರ್, ಬಿ.ಎನ್.ದಕ್ಷಿಣಾಮೂರ್ತಿ, ಎಸ್.ಎಸ್.ಜಗದೀಶ್. ಟಿ.ಎಂ.ಶಿವಕುಮಾರ್, ಎನ್.ಟಿ.ಶೇಷಾಚಲ, ಕೆ.ಎಸ್.ರಾಜಕುಮಾರ್, ಲಕ್ಷ್ಮೀಶ, ಎಚ್.ಎಸ್.ಸಂಜಯ, ಸೋಮಶೇಖರ್, ಎಸ್.ಎಸ್.ಗಿರೀಶ್, ಡಿ.ರಮೇಶ್ ಇತರರಿದ್ದರು.