???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕೈ ಜೋಡಿಸಿ


ಮಳವಳ್ಳಿ : ಕರ್ನಾಟಕ ಸುವರ್ಣ ಮಹೋತ್ಸವ ಸಂಭ್ರಮದ ಸಮಯದಲ್ಲಿ 30 ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿ ಪುಟದಲ್ಲಿ ದಾಖಲಾಗುವಂತೆ ಯಶಸ್ವಿಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೆಶ್ ಜೋಶಿ ಮನವಿ ಮಾಡಿದರು.


ಜಿಲ್ಲಾಡಳಿ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮ್ಮೇಳನದ ಸಮಾಲೋಚನ ಸಭೆ ಉದ್ಘಾಟಿಸಿ ಮಾತನಾಡಿದರು.


ಜಿ.ಟಿ.ವೀರಪ್ಪ ಸೇರಿದಂತೆ ಹಲವಾರು ಗಣ್ಯರು, ಜಿಲ್ಲೆಯಲ್ಲಿ ಲಕ್ಷಗಟ್ಟಲೇ ಜನರನ್ನು ಸೇರಿಸಿ ಸಮ್ಮೇಳನ ನಡೆಸಲು ಸಾಧ್ಯವೆ ಎಂದು ಸಂದೇಹ ವ್ಯಕ್ತಪಡಿಸಿದ್ದರು. ರಾಜ್ಯದಲ್ಲೇ ಸಂಪೂರ್ಣ ಕನ್ನಡಿಗರನ್ನು ಹೊಂದಿರುವ ಮಂಡ್ಯ ಜಿಲ್ಲೆಯಾಗಿದೆ. ಕನ್ನಡದ ಅಸ್ಮಿತೆಯ ಹಬ್ಬವಾಗಿರುವ ಸಮ್ಮೇಳನಕ್ಕೆ ಲಕ್ಷಾಂತರ ಜನರನ್ನು ಸ್ವಾಭಿಮಾನದಿಂದ ಹರಿದುಬರುವ ಮೂಲಕ ಐತಿಹಾಸಿಕ ಸಮ್ಮೇಳನವಾಗಿ ಯಶಸ್ವಿಯಾಗಲಿದೆ ಎಂದು ತಿಳಿಸಿದರು.


ಮುತ್ತುರಾಜನನ್ನು ರಾಜಕುಮಾರ ಎಂದು ಹೆಸರಿಸಿ ಕನ್ನಡದ ವರನಟನನ್ನು ಕೊಡುಗೆಯಾಗಿ ನೀಡಿದವರು ಮಳವಳ್ಳಿ ತಾಲೂಕಿನ ಎಸ್.ಎಲ್.ಎನ್.ಸಿಂಹ ಕಾರಣಕರ್ತರು. ಅಂತ್ಯಂತ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಹಾಗೂ ಮುತ್ತುರಾಯನ ನೆಲೆಯಾಗಿರುವ ತಾಲೂಕಿನ ಜನರು ಸಮ್ಮೇಳನಕ್ಕೆ ಅಭಿಮಾನ ಪೂರಕವಾಗಿ ಆಗಮಿಸಬೇಕು ಎಂದು ಮನವಿ ಮಾಡಿದರು.


ಮಹಾಭಾರತ, ರಾಮಾಯಣದಂತಹ ಮಹಾಕಾವ್ಯಗಳ ಕಥನಾಯಕರ ಸಾಕ್ಷೃವಿರುವ ನೆಲನಾಡು ಮಂಡ್ಯ ಜಿಲ್ಲೆಯಾಗಿದೆ. ಸಮ್ಮೇಳನವನ್ನು ಕನ್ನಡಿಗರ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾಭಿಮಾನದ ಸಂಕೇತವಾಗಿ ಮೆರೆಸಬೇಕು. ಡಿ.20, 21, 22 ರಂದು ಮೂರು ದಿನಗಳು ನಡೆಯುವ ಕಾರ್ಯಕ್ರಮಗಳನ್ನು ಸ್ವಾಭಿಮಾನದ ಸಂಕೇತವಾಗಿ ಆಚರಿಸಲು ಎಲ್ಲರೂ ತಮ್ಮ ಕುಟುಂಬದ ಕಾರ್ಯಕ್ರಮವೆಂದು ಭಾವಿಸಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.


ಕಸಾಪ ಜಿಲ್ಲಾ ಸಂಚಾಲಕಿ ಮೀರಾಶಿವಲಿಂಗಯ್ಯ ಮಾತನಾಡಿ, ಕನ್ನಡಿಗರ ಆಶಾಜ್ಯೋತಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಲು ಅನೇಕರು ತಮ್ಮ ತನು, ಮನ, ಧನವನ್ನು ವ್ಯಯಿಸಿದ್ದಾರೆ. ನಾಡಿನ ಸಂಸ್ಕೃತಿ, ಕಲಾವಿದರು ಹಾಗೂ ವೈವಿದ್ಯತೆಯನ್ನು ವಿಶ್ವಾದ್ಯಂತ ಪಸರಿಸಲು ಮತ್ತು ಕನ್ನಡ ಭಾಷೆಯನ್ನು ಗೌರವಿಸುವಂತೆ ಮಾಡಲು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಲಿದೆ ಎಂದರು.


ತಹಸೀಲ್ದಾರ್ ಬಿ.ವಿ.ಕುಮಾರ್, ತಾಪಂ ಇಒ ಶ್ರೀನಿವಾಸ್, ಬಿಇಒ ಉಮಾ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು, ಜಿಲ್ಲಾ ಗೌರವ ಕಾರ್ಯದರ್ಶಿ ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಚೇತನಕುಮಾರ್, ಸಾಹಿತಿಗಳಾದ ಮ.ಸಿ.ನಾರಾಯಣ, ಬಸಪ್ಪ ನೆಲಮಾಕನಹಳ್ಳಿ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಶಿವಮಾದೇಗೌಡ, ಮರಿಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಎಂ.ಎಚ್.ಕೆಂಪಯ್ಯ, ಸಂಘಟನೆ ಮುಖಂಡ ಭರತ್ ರಾಜ್, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು ಸೇರಿದಂತೆ ಇತರರು ಇದ್ದರು.