ಜಿಲ್ಲೆ

ಸ್ವಚ್ಛ ಭಾರತ್ ಅಭಿಯಾನ ಯಶಸ್ಸಿಗೆ ಕೈಜೋಡಿಸಿ

ಹಿರಿಯೂರು: ಸ್ವಚ್ಛ ಭಾರತ್ ಅಭಿಯಾನ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮೊಯಿನುದ್ದಿನ್ ಹೇಳಿದರು.

ನಗರದ ವಕೀಲರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಇಂದಿನ ಕಲುಷಿತ ವಾತಾವರಣ ಮತ್ತು ಪರಿಸರ ಹಾನಿಯಿಂದ ಮಾನವನಲ್ಲಿ ಅನಾರೋಗ್ಯ ಸಮಾನವಾಗಿದ್ದು, ಆಯುಸ್ಸು ಇಳಿಕೆಯಾಗುತ್ತಿದೆ. ಆದ್ದರಿಂದ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಘ, ಸಂಸ್ಥೆಗಳು ಪಣತೊಡಬೇಕಿದೆ ಎಂದರು.

ನ್ಯಾಯಾಧೀಶರಾದ ಶಿಲ್ಪಾ ತಿಮ್ಮಾಪುರ, ಶ್ರೀಧರ್, ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ರಂಗಸ್ವಾಮಿ, ವಕೀಲರಾದ ತಿಪ್ಪೇಸ್ವಾಮಿ, ಪಾಂಡುರಂಗಯ್ಯ, ಮೋಹನ್, ನಾಗಣ್ಣ, ಚಿತ್ರಲಿಂಗಪ್ಪ, ನವಾಜ್ ಇತರರಿದ್ದರು.