ನರಗುಂದ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದಿಂದ ಉಚಿತ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗಪಡೆದುಕೊಂಡು ಸರ್ವಋತುಗಳಲ್ಲಿ ಸದೃಢ ಸಮಾಜ ನಿರ್ವಣಕ್ಕೆ ಅಣಿಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.
ಪಟ್ಟಣದ ಅಧ್ಯಾಪಕನಗರ ಬಡಾವಣೆಯ ಶ್ರೀ ಮಾರುತಿ ದೇವಸ್ಥಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ ಭೇಟಿ ಬಚಾವೋ ಭೇಟಿ ಪಢಾವೋ, ಪೌಷ್ಟಿಕ ಆಹಾರ ಪೋಷಣ ಅಭಿಯಾನ ಕಾನೂನು ಅರಿವು -ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಡಿಪಿಒ ರೂಪಾ ಗಂಧದ ಮಾತನಾಡಿ, ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದಿಂದ ಪೊರೈಸಲಾಗುವ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ. ಗರ್ಭಿಣಿಯರಿಗಾಗಿ ಮಾತೋಶ್ರೀ, ಜನನಿ ಸುರಕ್ಷಾ ಮುಂತಾದ ಯೋಜನೆಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಕೀಲ ಎಂ.ಬಿ. ಕುಲಕರ್ಣಿ, ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಗಣಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ, ರೇಣುಕಾ ಕೆಂಚನಗೌಡ್ರ, ಶಂಕ್ರಮ್ಮ ಸೂಳಿಕೇರಿ, ಜಯಶ್ರೀ ಕಟ್ಟಿ, ಕಾವ್ಯಾ ಜಾಲಿಹಾಳ, ಮಂಜುನಾಥ ಗುಗ್ಗರಿ, ಎಲ್.ಎಸ್. ಗಾಯಕವಾಡ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಉಪಸ್ಥಿತರಿದ್ದರು.