ಜಿಲ್ಲೆ

ಜೊಯಿಡಾ ತಹಸೀಲ್ದಾರ್ ನಿಧನ

Uttara Kannada - Subash Hegde

ಜೊಯಿಡಾ: ತಹಸೀಲ್ದಾರ್ ರಾಜೇಶ ಚೌಹಾಣ(50) ಅನಾರೋಗ್ಯದಿಂದ ಶನಿವಾರ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನರಾದರು.
ಬೆಳಗಾವಿ ಜಿಲ್ಲೆಯ ಲೋಂಡಾ ಮೂಲದ ಅವರು ಖಾನಾಪುರ ಸೇರಿ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು.
ವಿಧಾನಸಭೆ ಚುನಾವಣೆಗಾಗಿ ಜೊಯಿಡಾಕ್ಕೆ ತಹಸೀಲ್ದಾರರಾಗಿ ಆಗಮಿಸಿದ್ದರು. ಚೌತಿ ರಜೆಗೆ ತೆರಳಿದ ಅವರು ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ.