ಹಳ್ಳೂರ: ಸಮೀಪದ ಶಿವಾಪುರ(ಹ) ಗ್ರಾಮದಲ್ಲಿ ಜೋಗುಳಭಾವಿ ಸತ್ಯಮ್ಮದೇವಿಯ ಮಂದಿರ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಮಂಗಳವಾರ ನೆರವೇರಿತು.
ಮುಖಂಡ ಸವೋರ್ತ್ತಮ ಜಾರಕಿಹೊಳಿ ಮಂದಿರ ಉದ್ಘಾಟಿಸಿದರು. ಕೊಣ್ಣೂರ&ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮುತೆದೆಯರಿಂದ ಆರತಿಮೇಳ, ಕುಂಭಮೇಳ, ಸತ್ಯಮ್ಮ ಮೂರ್ತಿ ಮೆರವಣಿಗೆ ಜರುಗಿತು. ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸತಿಕ ಸಮಾರಂಭ, ಭಜನೆ, ಪದಗಳು ಜರುಗಿದವು. ಜಾತ್ರೆಯು ಸಡಗರ ಸಂಭ್ರಮದಿಂದ ತುಂಬಿತ್ತು.