ಮಂಗಳೂರು : ರಾಮ್‌ಸೇನಾ ಮಂಗಳೂರು ಜಿಲ್ಲೆ ಮತ್ತು ಜೋಗಿಮಠ ಕದ್ರಿ ಆಶ್ರಯದಲ್ಲಿ ಗೋ ಮಾತಾ ಪೂಜನ ಕಾರ್ಯಕ್ರಮ ಕದ್ರಿಯ ಜೋಗಿ ಮಠದಲ್ಲಿ ನಡೆಯಿತು. ಸಪ್ತ ಗೋಪರಿಕ್ರಮ , ಭಕ್ತರಿಂದ ಗೋ ಗಾನ ಸಂಕೀರ್ತನೆ ಹಾಗೂ ಗೋ ಮಾತೆಗೆ ಆರತಿ ಎತ್ತಿ ಸಿಹಿ ತಿಂಡಿ ವಿತರಿಸಲಾಯಿತು. ಕದ್ರಿ ಜೋಗಿ ಮಠದ ಶ್ರೀ ರಾಜಯೋಗಿ ನಿರ್ಮಲ್ ನಾಥಜೀ ಮಹಾರಾಜ್, ದ.ಕ.ಸಂಸದ, ಶಾಸಕ ವೇದವ್ಯಾಸ ಕಾಮತ್ ರಾಮ್ ಸೇನಾ ಅಧ್ಯಕ್ಷ ಪ್ರಸಾದ್ ಅತ್ತಾವರ ಉಪಸ್ಥಿತರಿದ್ದರು.