ಜಿಲ್ಲೆ

ರಾಜಾ ಫಾಲ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಿದ ಯೂ ಟ್ಯೂಬರ್‌ ವಿರುದ್ಧ ಎಫ್‌ಐಆರ್‌

Uttara Kannada - Subash Hegde

ಸಿದ್ದಾಪುರ: ಜೋಗ ಜಲಪಾತದ ರಾಜಾ ಫಾಲ್ಸ್ ನ್ನು ಅಪಾಯಕಾರಿ ವೀಕ್ಷಣೆಗೆ ಜನರಿಗೆ ಯೂ ಟ್ಯೂಬ್ ಮೂಲಕ ಪ್ರೇರಣೆ ನೀಡಿದ ಆರೋಪದ ಮೇಲೆ ಯೂ ಟ್ಯೂಬರ್ ಒಬ್ಬರ ಮೇಲೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬAಧ ಬೆಂಗಳೂರಿನ ಜಾಲಹಳ್ಳಿ ಮೂಲದ ಯೂ ಟ್ಯೂಬರ್ ಗೌತಮ ಅರಸು, ಸಪರಬ ಮೂಲದ ಗೈಡ್ ಸಿದ್ದರಾಜ್ ವಿರುದ್ಧ ಸಿದ್ದಾಪುರ ಠಾಣೆ ಪಿಎಸ್‌ಐ ಶಾಂತಿನಾಥ ಪಾಸಾನೆ ದೂರು ದಾಖಲಿಸಿದ್ದಾರೆ. ಜೋಗ, ಸ್ಲಿಪ್ ಆದ್ರೆ ಗೋವಿಂದ ಅನ್ನೋ ಫೀಲಿಂಗ್ ಜೋಗ್‌ಫಾಲ್ಸ್ ಕ್ಲಿಪ್ ವ್ಯೂ, ಕರುನಾಡು ಬೈಕರ್ಸ್ ಎಂಬ ವಿಡಿಯೋವನ್ನು ಗೌತಮ್ ನಾಯ್ಡು ಅವರ ಖಾತೆಯಲ್ಲಿ ಅಪ್‌ಲೋಡ್ ಮಾಡಿ, ಸಾರ್ವಜನಿಕರನ್ನು ಅಪಾಯಕ್ಕೆ ನೂಕಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿದ್ದಾಪುರ ತಾಲೂಕಿನ ವ್ಯಾಪ್ತಗೆ ಬರುವ ರಾಜಾ ಫಾಲ್ಸ್ ಧುಮ್ಮಿಕ್ಕುವ ಕಡೆಯಿಂದ ತೆರಳಿ ವೀಕ್ಷಣೆ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಅಲ್ಲಿಗೆ ತೆರಳಿ ವಿಡಿಯೋ ಮಾಡಿ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಬೇರೆ ಪ್ರವಾಸಿಗರು ಅಲ್ಲಿಗೆ ತೆರಳುವಂತೆ ಪ್ರೇರೇಪಿಸಿದ್ದಾರೆ ಎಂದು ದೂರಲಾಗಿದೆ.