ಜಿಲ್ಲೆ

ವಿಶ್ವವಿಖ್ಯಾತ ಜೋಗದಲ್ಲಿ ಅರಳಿದ ಕಮಲ

Shivamogga

ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ವಾಸಂತಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಬುಧವಾರ ಅವಿರೋಧ ಆಯ್ಕೆಯಾದರು. ಇದರೊಂದಿಗೆ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ. 2004ರಲ್ಲಿ ಆಸ್ತಿತ್ವಕ್ಕೆ ಬಂದ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಉದಯವಾದ ನಂತರ ನಾಲ್ಕನೇ ಅವಧಿ ಚುನಾವಣೆ ಕಳೆದ ಕಳೆದ ನವೆಂಬರ್​ನಲ್ಲಿ ನಡೆದಿತ್ತು. ಪಟ್ಟಣ ಪಂಚಾಯಿತಿಯ ಹನ್ನೊಂದನೇ ಅಧ್ಯಕ್ಷರಾಗಿ ವಾಸಂತಿ ರಮೇಶ್ ಹಾಗೂ ಏಳನೇ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಆ್ಕಯೆಾದರು.

ಕಾಂಗ್ರೆಸ್​ನಿಂದ ಗೆದ್ದ ಏಕೈಕ ಸದಸ್ಯ ಎಂ.ರಾಜು ಅವರು ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ ಅವರ ನಾಮಪತ್ರಕ್ಕೆ ಸೂಚಕರಿಲ್ಲದ ಕಾರಣ ಪರಿಶೀಲನೆ ವೇಳೆ ಅವರ ಅರ್ಜಿ ತಿರಸ್ಕೃತಗೊಂಡಿತು.

ಮೂಲತಃ ಶಿವಮೊಗ್ಗದ ಹಳೇ ಮಂಡ್ಲಿಯ ನಿವಾಸಿಯಾಗಿರುವ ವಾಸಂತಿ ರಮೇಶ್ ಅವರು ಎಸ್​ಎಸ್​ಎಲ್​ಸಿ ಶಿಕ್ಷಣವನ್ನು ಪಡೆದಿದ್ದು ಕೆಲ ವರ್ಷಗಳ ಹಿಂದೆ ಕಾರ್ಗಲ್​ನ ರಮೇಶ್ ಅವರನ್ನು ಮದá-ವೆಯಾಗಿದ್ದಾರೆ. 5ನೇ ವಾರ್ಡಿನಿಂದ ಗೆಲುವು ಪಡೆದಿದ್ದು ಪ್ರಸ್ತುತ ಜೋಗ ರಸ್ತೆಯಲ್ಲಿ ವಾಸವಾಗಿದ್ದಾರೆ. ಮೂಲತಃ ಚಾಲಕರಾದ ಪಿ.ಮಂಜುನಾಥ್ ಅವರು ಬಿಜೆಪಿ ಪಕ್ಷವನ್ನು ಸೇರಿ ಆರು ವರ್ಷಗಳಾಗಿದೆ. ಅವರ ಪತ್ನಿ ಪಾರ್ವತಿ ಅವರು ಕಳೆದ ಪಟ್ಟಣ ಪಂಚಾಯಿತಿಯ ಆಡಳಿತಾವಧಿಯಲ್ಲಿ ಇದೇ ವಾರ್ಡಿನ ಬಿಜೆಪಿ ಸದಸ್ಯರಾಗಿದ್ದರು.