ಕಾಂತೆಬೆನ್ನೂರು ಗ್ರಾಮದ ಶ್ರೀಮೈಲಮ್ಮದೇವಿ ಹಾಗೂ ಗಣೇಶ ದೇವರ ಜೋಡಿ ರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. 
ಜಿಲ್ಲೆ

ಜೋಡಿ ರಥೋತ್ಸವ ಸಂಪನ್ನ

Kopala - Desk - Eraveni

ಹೂವಿನಹಡಗಲಿ: ತಾಲೂಕಿನ ಕಾಂತೆಬೆನ್ನೂರು ಗ್ರಾಮದ ಶ್ರೀಮೈಲಮ್ಮದೇವಿ ಹಾಗೂ ಗಣೇಶ ದೇವರ ಜೋಡಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಡೊಳ್ಳು ಕುಣಿತ, ಸಮಾಳ, ನಂದಿಕೋಲು ಮಂಗಳ ವಾಧ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭೋತ್ಸವ ನಡೆಯಿತು. ಸಂಜೆ 5.30.ಕ್ಕೆ. ದೇವಸ್ಥಾನದಿಂದ ಗಣೇಶ ಹಾಗೂ ಮೈಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ರಥಗಳಲ್ಲಿ ಪ್ರತಿಷ್ಠಾಪಿಸಿದ ನಂತರ ದೇವಿ ಆರಾಧಕ ಮಂಜುನಾಥ ಕರ್ಪೂರ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಿದರು.

ದೇವಸ್ಥಾನದಿಂದ ದೇವಿಯ ಪಾದಗಟ್ಟೆಯವರೆಗೆ ನಡೆದು ಮೂಲ ಸ್ಥಾನಕ್ಕೆ ಮರಳಿದವು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗೊಂಬೆ ವೇಷಧಾರಿಗಳು ಹಾಗೂ ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ತಂದರು. ಸಾವಿರಾರು ಭಕ್ತರು ಮೈಲಮ್ಮ ನಿನ್ನಾಲ್ಕೂ ಉಘೇ, ಉಘೇ ಎನ್ನುತ್ತಾ ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ಸಮರ್ಪಿಸಿದರು.