ಮರಿಯಮ್ಮನಹಳ್ಳಿ ಆರಾಧ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣ ಮತ್ತು ಶ್ರೀ ಆಂಜನೇಯ ಜೋಡಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. 
ಜಿಲ್ಲೆ

ಜೋಡಿ ರಥೋತ್ಸವ ಅದ್ದೂರಿ

ರುದ್ರಪ್ಪ ವಾಲಿ

ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವಗಳಾದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿಗಳ ಜೋಡಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ರಥೋತ್ಸವ ಅಂಗವಾಗಿ ರಥಾಂಗಹೋಮ ನಡೆಯಿತು.

ನಂತರ ಪಲ್ಲಕ್ಕಿಯಲ್ಲಿ ಉಭಯಸ್ವಾಮಿಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಪ್ರಾಂಗಣವನ್ನು ಹೂಗಳಿಂದ, ಮುಖ್ಯಬೀದಿಗಳನ್ನು ವಿದ್ಯತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಧಾರ್ಮಿಕ ವಿಧಿ-ವಿಧಾನಗಳನ್ನು ಕಿನ್ನಾಳದ ಗಂಗೂರ ಮನೆತನದವರು ನಡೆಸಿದರು. ನಂತರ ಸಾವಿರಾರು ಭಕ್ತರು ಉಭಯ ರಥಗಳನ್ನು ಎಳೆದು ಪುನೀತರಾದರು. ಈ ಜೋಡುರಥಗಳಿಗೆ ಈ ಬಾರಿ ಕೊನೆಯ ರಥೋತ್ಸವವಾಗಿದ್ದು ಮುಂದಿನ ವರ್ಷ ಹೊಸ ರಥಗಳನ್ನು ಎಳೆಯಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.