ಜಿಲ್ಲೆ

ಕೋವಿಡ್​-19 : ಡಿಎಂಎಲ್​​ಟಿ ಆದವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಅವಕಾಶ

sspmiracle1982
ಚಿಕ್ಕಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿ ಪ್ರಯೋಗಶಾಲಾ ತಂತ್ರಜ್ಞ ಮತ್ತು ಡೇಟಾ ಎಂಟ್ರಿ ಆಪರೇಟರ್​​ಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೆಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.
18 ಪ್ರಯೋಗಶಾಲಾ ತಂತ್ರಜ್ಞ ಹುದ್ದೆಗಳಿದ್ದು, ಮಾಸಿಕ ವೇತನ 10 ಸಾವಿರ ರೂ. ಜತೆಗೆ ಒಂದು ಗಂಟಲು ದ್ರವ ಸಂಗ್ರಹಕ್ಕೆ 15 ರೂ. ಇರುತ್ತದೆ.
ಡಿಎಂಎಲ್​ಟಿ ಪರೀಕ್ಷೆ / ಪದವಿ  ಪಾಸಾಗಿರಬೇಕು. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಗಣಕಯಂತ್ರ ತರಬೇತಿ ಪೂರೈಸಿರಬೇಕು.
5 ಡೇಟಾ ಎಂಟ್ರಿ ಆಪರೇಟರ್ ಹುದ್ದೆ ಇದ್ದು, ಮಾಸಿಕ 14,000 ರೂ. ವೇತನ ಇರುತ್ತದೆ.
ಯಾವುದೇ ಪದವಿ ಮತ್ತು ಡಿಪ್ಲೊಮಾ ಕಂಪ್ಯುಟರ್ ಅಪ್ಲಿಕೇಷನ್ ಕೋರ್ಸ್ ಜತೆಗೆ 2 ವರ್ಷ ಅನುಭವ  ಹೊಂದಿದ ಪ್ರಮಾಣಪತ್ರವಿರಬೇಕು.
ಆಗಸ್ಟ್ 24 ರೊಳಗಾಗಿ www.chikkaballapur.nic.in ಮೂಲಕ ಅರ್ಜಿ ಸಲ್ಲಿಸಬಹುದು.
ಆಗಸ್ಟ್ 26 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಎಲ್ಲ ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ಪರಿಶೀಲನೆಗೆ ಕಚೇರಿಗೆ ಹಾಜರಾಗಬೇಕೆಂದು ಪ್ರಕಟಣೆ ತಿಳಿಸಿದೆ.