ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಐಟಿಐ ಕಾಲೇಜ್ ಪ್ರಥಮ ವರ್ಷದ ತರಬೇತಿದಾರರನ್ನು ಸ್ವಾಗತ ಕೋರುವ ಸಮಾರಂಭದಲ್ಲಿ ವಚನ ಪಿತಾಮಹ ಡಾ ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾ ಅಧಿಕಾರಿ ಡಾ.ವಿ.ಡಿ. ಐಹೊಳ್ಳಿ ಮಾತನಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಿ ದಳವಾಯಿ, ಪ್ರಾಚಾರ್ಯ ಎಂ.ಡಿ.ಪಡಸಲಗಿ ಇದ್ದರು. 
ಜಿಲ್ಲೆ

ಕೌಶಲ್ಯಾಧಾರಿತ ಶಿಕ್ಷಣದಿಂದ ಉದ್ಯೋಗ ಖಾತ್ರಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಯಾವುದೇ ಉದ್ಯೋಗ ಸಣ್ಣ ಉದ್ಯೋಗವೆಂದು ಕೀಳರಿಮೆ ತೋರಿಸಬಾರದು. ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದರಿಂದ ಉದ್ಯೋಗ ದೊರಕಿಸಿಕೊಳ್ಳುವುದು ಅಷ್ಟೆ ಅಲ್ಲ ಉದ್ದಿಮೆದಾರರಾಗಿ ಮುಂದುವರೆಯಲು ಸಾಧ್ಯಎಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಿ ದಳವಾಯಿ ಮಾತನಾಡಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಐಟಿಐ ಕಾಲೇಜ್ ಪ್ರಥಮ ವರ್ಷದ ತರಬೇತಿದಾರರನ್ನು ಸ್ವಾಗತ ಕೋರುವ ಸಮಾರಂಭದಲ್ಲಿ ಮಾತನಾಡಿದರು.

ವಚನ ಪಿತಾಮಹ ಡಾ ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾ ಅಧಿಕಾರಿ ಡಾ.ವಿ.ಡಿ. ಐಹೊಳ್ಳಿ ಮಾತನಾಡಿ, ಹಿರಿಯರು, ದಾನಿಗಳು, ಸಂತರು, ತ್ಯಾಗಿಗಳು ತಮ್ಮ ಬದುಕನ್ನು ಮೀಸಲಾಗಿಟ್ಟ ಆ ಮಹನೀಯರನ್ನು ಸ್ಮರಿಸಿ ಮುನ್ನಡೆದಾಗ ನಮ್ಮ ಕೆಲಸವು ಅರ್ಥಪೂರ್ಣವಾಗುತ್ತದೆ. ಈ ಸಂಸ್ಥೆಯಿಂದ ಬಹಳಷ್ಟು ತರಬೇತಿದಾರರು ಪ್ಲೇಸಮೆಂಟ್ ಆಗುತ್ತಿರುವುದು ಸಂತೋಷದಾಯಕ ಎಂದರು.

ಪ್ರಾಚಾರ್ಯ ಎಂ.ಡಿ.ಪಡಸಲಗಿ, ತರಬೇತಿದಾರ ಸಂತೋಷ ಕರಿಗಾರ, ದೀಪಿಕಾ ಸಾವಳಸಂಗ, ಸಂಜೀವ ದೇಶಪಾಂಡೆ, ಯಶವಂತ ಚವ್ಹಾಣ ಉಪಸ್ಥಿತರಿದ್ದರು.