ವಿಜಯಪುರ: ನಗರದ ಜೆಎಂ ರಸ್ತೆಯಲ್ಲಿರುವ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು ಆವರಣದಲ್ಲಿ ಅ.4ರಂದು ಉದ್ಯೋಗ ಮೇಳ ನಡೆಯಲಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದರಬಾರ ಸಂಸ್ಥೆಯ ಶ್ರೀಮತಿ ಕುಮುದಬೇನ ದರಬಾರ ಬಿಬಿಎ ಮತ್ತು ಬಿಸಿಎ ಕಾಲೇಜು, ಡಿಕೆಎಸ್ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ.
ವಿವಿಧ ಎಂಎನ್‌ಸಿ ಕಂಪೆನಿಗಳು ಹಾಗೂ ಸ್ಥಳೀಯ ಖಾಸಗಿ ಕಂಪೆನಿಗಳ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಆಸಕ್ತರು ತಮ್ಮ ಶಾಲಾ ದಾಖಲಾತಿಗಳ ಸಹಿತ ಕನಿಷ್ಠ 5 ಸೆಟ್ ಬಯೋಡೇಟಾ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಭಾಗವಹಿಸಬಹುದಾಗಿದೆ. ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗೆ ಖುದ್ದಾಗಿ ಅಥವಾ ಫೋನ್ ಮೂಲಕ (ಮೊ. 9480310837, 9945000793) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.