ಜಿಲ್ಲೆ

ಗುರಿ ಸಾಧನೆಯ ಹುಮ್ಮಸ್ಸು ಇರಲಿ: ಪ್ರಕಾಶ ಶೆಟ್ಟಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಿದ್ಯಾಭ್ಯಾಸ ಮುಗಿಸಿರುವ ಎಲ್ಲರಿಗೂ ಒಂದು ಕನಸು ಇರಬೇಕು. ಅದು ನಿದ್ದೆಯಲ್ಲಿದ್ದಾಗ ಬರುವ ಕನಸಲ್ಲ, ಅದು ಸಾಧನೆ ಎಂಬ ಕನಸಾಗಿರಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಗುರಿ, ಕಾರ್ಯ ಸಾಧಿಸುವ ಹುಮ್ಮಸ್ಸು ಇರಬೇಕು ಎಂದು ಉದ್ಯೋಗಾಕಾಂಗಳಿಗೆ ಬೆಂಗಳೂರು ಎಂಆರ್​ಜಿ ಗ್ರೂಪ್​ನ ಅಧ್ಯಕ್ಷ ಕೆ. ಪ್ರಕಾಶ್​ ಶೆಟ್ಟಿ ಸಲಹೆ ನೀಡಿದರು.

ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾಭವನದ ನಿಮಾರ್ಣ ಹಾಗೂ ಅಭಿವೃದ್ಧಿ ಸಮಿತಿ ಚಾರಿಟೆಬಲ್​ ಟ್ರಸ್ಟ್​ನ ಕೌಶಲ ಅಭಿವೃದ್ಧಿ ಕೇಂದ್ರ ಕುಂತಳ ನಗರದಲ್ಲಿ ಎಂಆರ್​ಜಿ ಗ್ರೂಪ್​ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೃಹತ್​ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಉದ್ಯೋಗ ಮೇಳದ ಅವಕಾಶ ಬಳಸಿಕೊಂಡು ಸುಂದರ ಬದುಕು ನಿಮ್ಮದಾಗಿಸಿಕೊಳ್ಳಬೇಕು. ತನ್ಮೂಲಕ ದೇಶವನ್ನೂ ಬೆಳಗಿಸಬೇಕು ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಜಗತ್ತಿನಲ್ಲಿ ಅತಿಹೆಚ್ಚು ಯುವಸಮುದಾಯವನ್ನು ಹೊಂದಿದ ದೇಶ ಭಾರತ. ಹೀಗಾಗಿಯೇ ಭಾರತ ಸರ್ಕಾರ ಯುವ ಪೀಳಿಗೆಗಾಗಿ 2015ರಲ್ಲಿ ಸ್ಕಿಲ್​ ಇಂಡಿಯಾ ಯೋಜನೆ ಜಾರಿಗೊಳಿಸಿದೆ. ಉದ್ಯೋಗ ಗಳಿಸಿದ ಬಳಿಕ ತಾವೆಲ್ಲ ಒಂದು ಹಂತದ ವರೆಗೆ ಉದ್ಯೋಗಿಯಾಗಿ ದುಡಿಯಿರಿ. ನಂತರ ಉದ್ಯಮಿಗಳಾಗಿ ಅನೇಕರಿಗೆ ಉದ್ಯೋಗ ನೀಡಿ ಎಂದು ಕಿವಿಮಾತು ಹೇಳಿದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಬಂಟರ ಸಮುದಾಯ ಕರಾವಳಿ ಭಾಗದ ಆಸ್ತಿಯಾಗಿದೆ. ಅವರು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಅರ್ಥಪೂರ್ಣವಾಗಿಯೇ ಆಯೋಜಿಸುತ್ತಾರೆ. ಸಮುದಾಯ ಭವನವನ್ನು ಕೌಶಲ ತರಬೇತಿ ಕೇಂದ್ರವನ್ನಾಗಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರಿಗಾಗಿಯೇ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದರು.

ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಮಾತನಾಡಿ, ಇಂತಹ ಉದ್ಯೋಗ ಮೇಳ ಎಲ್ಲ ಜಿಲ್ಲೆಗಳಲ್ಲೂ ನಡೆದರೆ ನಿರುದ್ಯೋಗ ಸಮಸ್ಯೆ ಕಾಡದು ಎಂದರು. ವಿ.ಪ. ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಯಾವ ಕಂಪನಿ, ಸಂಬಳ ಎಷ್ಟು ಎಂದು ನೋಡಬೇಡಿ. ಇದು ನಿಮ್ಮ ಭವಿಷ್ಯದ ಮೊದಲ ಮೆಟ್ಟಿಲು. ಹೀಗಾಗಿ ಸದುಪಯೋಗಮಾಡಿಕೊಳ್ಳಿ ಎಂದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿದರು.

ಸ್ಕಿಲ್​ ಡೆವೆಲಪ್​ಮೆಂಟ್​ ಸೆಂಟರ್​ನ ಅಧ್ಯಕ್ಷ ಅಶೋಕ್​ಕುಮಾರ್​ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಖ್ಯಾತ 25 ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದು, 1200ಕ್ಕೂ ಅಧಿಕ ಉದ್ಯೋಗಾವಕಾಶವಿದೆ. ಕಳೆದ ವರ್ಷ 450ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಿತ್ತು. ಈ ಬಾರಿ ಮೊದಲ ದಿನವೇ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಸಾವಿರದಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವ ನಿರೀೆ ಹೊಂದಿದ್ದೇವೆ ಎಂದರು.
ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್​ ಶೆಟ್ಟಿ, ಕಾಂಗ್ರೆಸ್​ ನಾಯಕ ಪ್ರಸಾದ್​ ಕಾಂಚನ್​, ರತ್ನಾಕರ ಹೆಗ್ಡೆ, ಆರ್​.ಉಪೇಂದ್ರ ಪೈ, ಸಾಯಿರಾಧಾ ಗ್ರೂಪ್​ನ ಎಂಡಿ ಮನೋಹರ್​ ಶೆಟ್ಟಿ, ಶರತ್​ ಶೆಟ್ಟಿ, ಸಾಗರ್​ ಶೆಟ್ಟಿ ಇತರರಿದ್ದರು. ಶ್ರಾವ್ಯಾ ಹಾಗು ಶ್ರೀಲಕ್ಷಿ$್ಮ ಪ್ರಾರ್ಥಿಸಿದರು. ದಿವ್ಯಾರಾಣಿ ಪ್ರದಿಪ್​ ಕಾರ್ಯಕ್ರಮ ನಿರೂಪಿಸಿದರು.