ಜಿಲ್ಲೆ

ಮೈಸೂರಿನಲ್ಲಿ ಅ.12 ರಂದು ಉದ್ಯೋಗ ಮೇಳ

ಮೈಸೂರು: ಗಾಣಿಗರ ಹಿತೈಷಿಗಳ ಬಳಗ ವತಿಯಿಂದ ಅ.12 ರಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಆರ್. ರಘು ತಿಳಿಸಿದರು.

ಮೇಳದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಳಗ ಪದಾಧಿಕಾರಿಗಳಾದ ವೆಂಕಟೇಶ್, ಜಿ. ಸ್ವಾಮಿ, ಕೆ.ಆರ್. ಚನ್ನಕೇಶವಶೆಟ್ಟಿ, ರುಕ್ಮಾಂಗದ, ಜಿ.ಎಸ್. ಸುಬ್ರಹ್ಮಣ್ಯ, ಧನಂಜಯ ಇದ್ದರು.