ಹುಬ್ಬಳ್ಳಿ: ಪ್ರಮುಖ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಕ್ಲಿಕ್ ನೌಕರಿ ಡಾಟ್ ಕಾಂ ಹಾಗೂ ಐಬಿಎಂಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಏ. 28ರಿಂದ ಎರಡು ದಿನಗಳವರೆಗೆ ಇಲ್ಲಿಯ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್ ನಲ್ಲಿ ಭಾರಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
50ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸಬರಿಗೆ ಮತ್ತು ಅನುಭವಿ ಅಭ್ಯಥಿರ್ಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನು ನೀಡಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ ಇವೆ.
ಬೆಳಗ್ಗೆ 9ಕ್ಕೆ ಮೇಳ ಆರಂಭವಾಗಲಿದ್ದು, ಐಟಿಐ, ಡಿಪ್ಲೋಮಾ, ಪಿಯುಸಿ, ಪದವೀಧರರು, ಸ್ನಾತಕೋತ್ತರ ಪದವಿ ಪಡೆದವರು ಪಾಲ್ಗೊಳ್ಳಬಹುದು.
ಅಭ್ಯರ್ಥಿಗಳು ಸ್ವವಿವರ, ಪಾಸ್ಪೋರ್ಟ್ ಗಾತ್ರದ ಫೋಟೋಗಳು ಮತ್ತು ಗುರುತಿನ ದಾಖಲೆಗಳೊಂದಿಗೆ ಹಾಜರಾಗಲು ಕೋರಲಾಗಿದೆ.