ಜಿಲ್ಲೆ

ಉದ್ಯೋಗ ಮೇಳ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನಗರದ ಕೆಜಿಪಿ ಫೌಂಡೇಷನ್ ವತಿಯಿಂದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಮತ್ತು ಜಿಲ್ಲಾ ಉದೊ್ಯೕಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಶ್ರೀಗಂಧ ಶೇಟ್ ನೇತೃತ್ವದಲ್ಲಿ ಮೇ 25 ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ವಿದ್ಯಾನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೃಹತ್ ಉದೊ್ಯೕಗ ಮೇಳ ಆಯೋಜಿಸಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಫೌಂಡೇಷನ್​ನ ಮ್ಯಾನೇಜರ್ ಪ್ರಕಾಶ ನಾಯಿಕ, ಉದೊ್ಯೕಗ ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 2,500 ಉದೊ್ಯೕಗಾವಕಾಶಗಳು ಲಭ್ಯ ಇವೆ. ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಐಟಿಐ, ಬಿಇ, ಡಿಪ್ಲೊಮಾ, ಬಿಇಡಿ ಸೇರಿ ವಿವಿಧ ಪದವೀಧರರು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.

ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಸ್ವ ವಿವರ, ಮೂರು ಭಾವಚಿತ್ರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಅನುಪ ಕಮ್ಮಾರ, ರಾಜು ಪಾಟೀಲ, ವಿನಾಯಕ ಕಿತ್ತೂರ, ನಾಗರಾಜ ಸೋಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.