Job fair benefits for youth  
ಜಿಲ್ಲೆ

ಯುವಕರಿಗೆ ಉದ್ಯೋಗ ಮೇಳ ಅನುಕೂಲ

Vijayapura - Desk - Doddanagouda Gudihindin

ಬಾದಾಮಿ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುಲ್ಲಿ ಉತ್ತಮ ಕೌಶಲ ರೂಢಿಸಿಕೊಳ್ಳಬೇಕು ಎಂದು ಉದ್ಯೋಗ ವಿನಿಮಯ ಕಚೇರಿಯ ಆಪ್ತ ಸಮಾಲೋಚಕಿ ಪಲ್ಲವಿ ಎ.ಸಿ. ಹೇಳಿದರು.

ಇಲ್ಲಿನ ಕಾಳಿದಾಸ ಪದವಿ ಮಹಾವಿದ್ಯಾಲಯ ಹಾಗೂ ಬಾಗಲಕೋಟೆ ಜಿಲ್ಲಾ ಮತ್ತು ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಕಾಳಿದಾಸ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬೆಟ್ಟಪ್ಪ ಕಾಟಾಪುರ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಮೇಳದ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಕೆರೂರ ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಎಂ. ಹೊಟ್ಟಿ, ವಿಷ್ಣು ರಾಠೋಡ ಹಾಜರಿದ್ದರು. ಉಪನ್ಯಾಸಕ ಎಚ್.ಎಂ. ಸಂಗಮದ ನಿರೂಪಿಸಿದರು.