ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಂುದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 2068 ಉದ್ಯೋ ಗಾಕಾಂಕ್ಷಿಗಳು ಉದ್ಯೋಗ ಪಡೆದುಕೊಡರು. 439 ಉದ್ಯೋಗಾಕಾಂಕ್ಷಿಗಳು ತರಬೇತಿಗೆ ಆಯ್ಕೆಯಾದರು.
ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ವಿವಿಂು ಉದ್ಯೋಗ ಘಟಕ, ಆಂತರಿಕ ಗುಣಮಟ್ಟ ಮತ್ತು ಆಶ್ವಾಸನಾ ಕೇಂದ್ರ ಮತ್ತು ಜಿಲ್ಲಾ ಉದ್ಯೋಗ ವಿನಿಮಂು ಕೇಂದ್ರದ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ ಎಸ್ಸೆಸ್ಸೆಲ್ಸಿಯಿ ಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಹತೆ ಹೊಂದಿರುವ 1889 ಪುರುಷರು, 1351 ಮಹಿಳೆಯರು ಸೇರಿದಂತೆ ಒಟ್ಟು 3240 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಮೇಳದಲ್ಲಿ ಬ್ಯಾಂಕಿಂಗ್, ಐಟಿ, ಆಟೋಮೊಬೈಲ್ಸ್, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ 78 ಕಂಪನಿಗಳು ಭಾಗವಹಿಸಿದ್ದವು. 2068 ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿಯೇ ಸಂದರ್ಶನ ಎದುರಿಸಿ ಉದ್ಯೋಗ ಗಿಟ್ಟಿಸಿಕೊಂಡರು. ಈ ಪೈಕಿ 1287 ಪುರುಷರು, 781 ಮಹಿಳೆಯರು ಆಯ್ಕೆಗೊಂಡರು ಎಂದು ವಿವಿಂು ಉದ್ಯೋಗ ಘಟಕದ ಉದ್ಯೋಗಾಧಿಕಾರಿ ಪ್ರೊ.ಆರ್.ಎಚ್. ಪವಿತ್ರಾ ಮಾಹಿತಿ ನೀಡಿದರು.
ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ವಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ಕೌಶಲ ತರಬೇತಿ ಇದ್ದರೆ ವಾತ್ರ ಉತ್ತಮ ಉದ್ಯೋಗ ಪಡೆಯಲು ಸಾಧ್ಯ. ಗುಣಮಟ್ಟದ ಶಿಕ್ಷಣ ದೊರೆತು ಕೌಶಲ ಇದರೆ ನಿರುದ್ಯೋಗದ ವಾತೇ ಇರುವುದಿಲ್ಲ ಎಂದರು.
ಸಾಕಷ್ಟು ಜನರಿಗೆ ಪದವಿ, ಕೌಶಲಗಳಿದ್ದರೂ ಂಾವಾಗ ಎಲ್ಲಿ ಹೇಗೆ ವಾತನಾಡಬೇಕು ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ವಿದ್ಯೆಯ ಜತೆಗೆ ವಿನಂು ಸಹ ಇರಬೇಕು. ಕಂಪೆನಿಗಳು ಗುಣಮಟ್ಟದ ಪ್ರಾವಾಣಿಕ ಅಭ್ಯರ್ಥಿಗಳನ್ನು ಅಪೇಕ್ಷಿಸುತ್ತಿದೆ. ಸಮಂು ಪಾಲನೆ, ಸಂದರ್ಭಗಳನ್ನು ವ್ಯಾನೇಜ್ ವಾಡುವುದು ಅಗತ್ಯ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಕನಿಷ್ಠ ಅರ್ಹತೆಂುನ್ನು ಗಳಿಸಿಕೊಳ್ಳುವುದು ಅಗತ್ಯ ಎಂದರು.
ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುವಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದ್ ಕುವಾರ್, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ, ಅಧ್ಯಂುನ ಕೇಂದ್ರ ಡೀನ್ ಡಾ.ಎನ್.ಆರ್. ಚಂದ್ರೇಗೌಡ ಹಾಗೂ ಇತರರು ಇದ್ದರು.