ಜಿಲ್ಲೆ

ಕುಂತಳನಗರ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ನಲ್ಲಿ ಉದ್ಯೋಗ ಮೇಳ

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ಕುಂತಳನಗರ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ ಆವರಣದಲ್ಲಿ ನ.18 ಮತ್ತು 19 ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉದ್ಯೋಗಕಾಂಕ್ಷಿಗಳಿಗಾಗಿ ಬೃಹತ್​ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಅಶೋಕ್​ ಕುಮಾರ್​ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.18ರಂದು ಬೆಳಗ್ಗೆ 9.30ಕ್ಕೆ ಉದ್ಯೋಗ ಮೇಳವನ್ನು ಎಂ.ಆರ್​.ಜಿ ಗ್ರೂಪ್​ ಛೇರ್ಮನ್​ ಕೆ.ಪ್ರಕಾಶ್​ ಶೆಟ್ಟಿ ಉದ್ಘಾಟಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಅಶ್ವತ್​ ನಾರಾಯಣ್​, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಶಾಸಕರಾದ ಸುರೇಶ ಗುರ್ಮೆ, ಯಶ್ಪಾಲ್​ ಸುವರ್ಣ, ಗುರುರಾಜ್​ ಶೆಟ್ಟಿ ಗಂಟೆಹೊಳೆ, ಮಾಜಿ ಮಂತ್ರಿ ಪ್ರಮೋದ್​ ಮಧ್ವರಾಜ್​, ಮಾಜಿ ಶಾಸಕ ರಘುಪತಿ ಭಟ್​, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟರ್​ ರತ್ನಕರ ಹೆಗ್ಡೆ, ಕಾಂಗ್ರೆಸ್​ ಮುಖಂಡರಾದ ಮಿಥುನ್​ ರೈ, ಪುಸಾದ್​ ಕಾಂಚನ್​, ಮುನಿಯಲ್​ ಉದಯ ಕುಮಾರ್​ ಶೆಟ್ಟಿ, ಭಾಗವಹಿಸಲಿದ್ದಾರೆ ಎಂದರು.

ಉದ್ಯೋಗಾಕಾಂಗಳು ಮಾತ್ರವಲ್ಲದೆ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳು ಸಹ ಇಂಟವ್ಯೂರ್ನಲ್ಲಿ ಭಾಗವಹಿಸಬಹುದು. ಕೆಲವು ಕಂಪನಿಗಳು ಅವಕಾಶ ಕೂಡಲಿವೆ. ಕಳೆದ ವರ್ಷ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 450 ಅಭ್ಯರ್ಥಿ ಗಳು ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.

ನಿಟ್ಟೆ ಜಸ್ಟಿಸ್​ ಕೆ. ಎಸ್​. ಹೆಗ್ಡೆ ಇನ್ಸಿಟ್ಯೂಟ್​ ಆಫ್​ ಮ್ಯಾನೇಜೆಂಟ್​ನ ಪ್ರಾಧ್ಯಾಪಕಿ ಹಾಗೂ ಸ್ಕಿಲ್​ ಡೆವಲಪ್ಟೆಂಟ್​ ಸೆಂಟರ್​ ಕಾರ್ಯಕ್ರಮ ನಿರ್ದೆಶಕಿ ದಿವ್ಯ ರಾಣಿ ಪ್ರದಿಪ್​ ಮಾತನಾಡಿ, ಮೇಳದಲ್ಲಿ 25 ಕಂಪನಿಗಳು ಭಾಗವಹಿಸಲಿದ್ದು ಸುಮಾರು 1500 ಉದ್ಯೋಗವಕಾಶಗಳು ಲಭ್ಯ ಇದೆ. ಸುಮಾರು 2500 ಮಂದಿ ಭಾಗವಹಿಸುವ ನಿರೀೆ ಇದೆ. ಇಂಜಿನಿಯರಿಂಗ್​, ಎಂ ಬಿ ಎ, ಡಿಪ್ಲೊಮಾ, ಐಟಿಐ, ಪಿಯುಸಿ, ಎಸ್​ಎಸ್​ಎಲ್ಸಿ ಕಲಿತ ಉದ್ಯೋಗಕಾಂಕ್ಷಿ ಗಳಿಗೆ ಸಂದರ್ಶನ ದಲ್ಲಿ ಭಾಗವಹಿಸಲು ಅವಕಾಶ ಇದೆ. ಒಂದು ಅಭ್ಯರ್ಥಿ ಗಳಿಗೆ 5 ಕಂಪನಿಯಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಲಾಗುವುದು. ಹೀಗಾಗಿ 5 ಬಯೋ ಡಾಟಾ ಪ್ರತಿ ತರಬೇಕು. 18ರಂದು ಬೆಳಿಗ್ಗೆ 9 ಗಂಟೆಯಿಂದ ಕುಂತಳ ನಗರದಲ್ಲಿರುವ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ್​ ಶೆಟ್ಟಿ ಕನ್ನನ್ನನ್​ ಸೆಂಟರ್​, ಹಾಗೂ ಚಾರಿಟೇಬಲ್​ ಟ್ರಸ್ಟ್​ ನ ಸ್ಕಿಲ್​ ಡೆವಲಪ್ಟೆಂಟ್​ ಸೆಂಟರ್​ನಲ್ಲಿ ಅಭ್ಯರ್ಥಿ ಗಳು ನೋಂದಣಿ ಮಾಡಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಪ್ರಮುಖರಾದ ಹೇಮಂತ್​ ಶೆಟ್ಟಿ, ಮಾರ್ಪಳ್ಳಿ ಪದ್ಮನಾಭ ಹೆಗ್ಡೆ, ಹರೀಶ್​ ಶೆಟ್ಟಿ ಬೆಳ್ಳೆ, ಹರೀಂದ್ರ ಹೆಗ್ಡೆ, ರಮೇಶ್​ ಶೆಟ್ಟಿ, ವಿಜಿತ್​ ಶೆಟ್ಟಿ, ಉಪಸ್ಥಿತರಿದ್ದರು.