ಜಿಲ್ಲೆ

ಮೇಳದಲ್ಲಿ ಉದ್ಯೋಗ ಪಡೆದ 200 ಜನ,  ಚೇತನ ಕಾಲೇಜಿನಲ್ಲಿ ಜಾಬ್ ಫೇರ್

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಶ್ರೀನಗರ ಬಳಿಯ ಚೇತನ್ ಬಿಜಿನೆಸ್ ಸ್ಕೂಲ್, ಧಾರವಾಡದ ಎಲ್.ಸಿ.ಸಿ ಮತ್ತು ಬಾಷ್ ಬ್ರಿಡ್ಜ್ ಸಿಎಸ್ಆರ್ ಸಹಯೋಗದೊಂದಿಗೆ ಬುಧವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

200ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗದ ಆಫರ್ ನೀಡಲಾಯಿತು. ಸುಮಾರು 40 ಕಂಪನಿಗಳ ಅಧಿಕಾರಿಗಳು ಮೇಳದಲ್ಲಿ 2000ಕ್ಕೂ ಅಧಿಕ ಅಭ್ಯರ್ಥಿಗಳ ಸಂದರ್ಶನ ನಡೆಸಿದರು.

ಮೇಳ ಉದ್ಘಾಟಿಸಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉತ್ತರ ಕರ್ನಾಟಕ ವಿದ್ಯಾಥಿರ್ಗಳಿಗೆ ಅನುಕೂಲವಾಗುವ ರೀತಿಯಲ್ಲಿ ಉದ್ಯೋಗ ಮೇಳವನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಬಹಳಷ್ಟು ಅನುಕೂಲವಾಗಿದೆ ಎಂದರು.

ಎಲ್ಸಿಸಿ ಸಿಇಒ ಮಹೇಶ ಭಟ್ ಮಾತನಾಡಿ, ಉದ್ಯೋಗ ಮೇಳದಲ್ಲಿ ಎಸ್ಎಸ್ಎಲ್ಸಿಯಿಂದ ಎಂಬಿಎ ಪದವಿವರೆಗೆ ಎಲ್ಲ ವಿದ್ಯಾರ್ಹತೆಯ ಅಭ್ಯರ್ಥಿಗಳು ಪಾಲ್ಗೊಂಡು ಸದುಪಯೋಗ ಪಡೆದರು ಎಂದರು.

ಬಾಷ್ ಬ್ರಿಡ್ಜ್ ಅಸಿಸ್ಟೆಂಟ್ ಪ್ಲೇಸ್ಮೆಂಟ್ ಆಫೀಸರ್ ಸುಧೀರ ಪಿಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂದರ್ಶನದ ಸಲಹೆಗಳನ್ನು ನೀಡಿದರು. ನಿರ್ದೇಶಕರಾದ ಡಾ. ವಿ.ಎಂ. ಕೊರವಿ ಅಧ್ಯಕ್ಷತೆ ವಹಿಸಿದ್ದರು.

ಡಾ. ರಮಾಕಾಂತ್ ಕುಲಕರ್ಣಿ ಪರಿಚಯಿಸಿದರು, ಡಾ. ಕಿರಣಕುಮಾರ ಸ್ವಾಗತಿಸಿದರು, ಡಾ. ಎಂ.ಎನ್. ಮಾಣಿಕ ವಂದಿಸಿದರು, ಪ್ರೊ. ಶ್ರೇಯಸ್ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.