ಕೊಕ್ಕಡ: ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು. ಕಾಲೇಜು ಕಿಂಡರ್ ಸಿಟಿ ಘಟಿಕೋತ್ಸವ, ವಾರ್ಷಿಕೋತ್ಸವ ಮಾ.15ರಂದು ನಡೆಯಿತು. ಬೆಥನಿ ವಿದ್ಯಾಸಂಸ್ಥೆ ಸಂಚಾಲಕ ಧರ್ಮಗುರು ಜೈಸನ್ ಸೈಮನ್ ಒ.ಐ.ಸಿ. ಅಧ್ಯಕ್ಷತೆ ವಹಿಸಿದ್ದರು. ಕೊಕ್ಕಡ ಸಂತ ಜಾನ್ ಚರ್ಚ್ ಧರ್ಮಗುರು ಅನಿಲ್ ಪ್ರಕಾಶ್ ಡಿ ಸಿಲ್ವ ಉದ್ಘಾಟಿಸಿದರು. ಬೆಥನಿ ಪಿ.ಯು. ಕಾಲೇಜು ಪ್ರಾಂಶುಪಾಲ ಧರ್ಮಗುರು ಡಾ.ವರ್ಗಿಸ್ ಕೈಪನಡ್ಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಮರ್ವಿನ್ ಲೋಬೊ, ಉಪಪ್ರಾಂಶುಪಾಲ ಜೋಸ್, ಎಂ.ಜೆ, ಪಿ.ಯು. ವಿಭಾಗ ಮುಖ್ಯಸ್ಥ ಸುಶೀಲ್ ಕುಮಾರ್, ಕೆ.ಜಿ. ವಿಭಾಗ ಮುಖ್ಯಸ್ಥೆ ಜೆಸ್ಸಿ ಉಪಸ್ಥಿತರಿದ್ದರು. ಅಭಿಸ್ಟ್ ಜೈನ್ ಸ್ವಾಗತಿಸಿದರು. ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳು ನಿರೂಪಿಸಿದರು. ಬೇಬಿ ರಿಯಾನಿಷಿ ವಂದಿಸಿದರು.