ಜಿಲ್ಲೆ

ಜ್ಞಾನಪ್ಪಯ್ಯ ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳ ಸೊಬಗು

ಮುದಗಲ್: ಪಟ್ಟಣದ ಮೇಗಳಪೇಟೆಯಲ್ಲಿರುವ ಪವಾಡ ಪುರುಷ ಜ್ಞಾನಪ್ಪಯ್ಯ ಜಾತ್ರೆ ಅಂಗವಾಗಿ ಸೋಮವಾರ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಯುವಕರ ಕಬಡ್ಡಿ ಪಂದ್ಯಾವಳಿ, ಟಗರಿನ ಕಾಳಗ ಮತ್ತು ರಾಸುಗಳು ಭಾರದ ಕಲ್ಲುಗಳನ್ನು ಎಳೆಯುವ ಸ್ಪರ್ಧೆ ಪ್ರಮುಖವಾಗಿದ್ದವು. ಟಗರಿನ ಕಾಳಗದಲ್ಲಿ ಸುಮಾರು 28 ಟಗರುಗಳು ಭಾಗಿಯಾಗಿದ್ದವು. ಟಗರುಗಳು ಹಣೆಗೆ ಡಿಕ್ಕಿ ಹೊಡೆದು ಹೋರಾಟ ಮಾಡುತ್ತಿದ್ದ ದೃಶ್ಯ ಕಂಡ ಜನರು ಕೇಕೆ ಹಾಕಿ ಸಂಭ್ರಮಿಸಿದರು.