ಚಿತ್ರದುರ್ಗ: ಜೀವನದಲ್ಲಿ ಎದುರಾಗುವ ಒತ್ತಡ, ಸಮಸ್ಯೆಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕ ಸಧೃಡತೆ ಅಗತ್ಯ. ಇದಕ್ಕಾಗಿ ಯೋಗ ಹಾಗೂ ಧ್ಯಾನ ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಪತಂಜಲಿ ಯೋಗ ಸಮಿತಿ ಗುರು ಪೂರ್ಣಿಮೆ ಪ್ರಯುಕ್ತ ಗುರುವಾರ ನಗರದ ಜ್ಞಾನ ಭಾರತಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಚಿತವಾಗಿ ಯೋಗ ಹಾಗೂ ಧ್ಯಾನ ತರಬೇತಿ ನೀಡುತ್ತಿರುವ ಯೋಗ ಶಿಕ್ಷಕರ ಕಾರ್ಯ ಶ್ಲಾಘನೀಯ. ಒತ್ತಡದ ಜೀವನ ಶೈಲಿ ನಿರ್ವಹಣೆಗೆ ಯೋಗ ಹಾಗೂ ಧ್ಯಾನ ಎಲ್ಲರಿಗೂ ಅವಶ್ಯಕ ಎಂದು ತಿಳಿಸಿದರು.
ಸಾನ್ನಿಧ್ಯವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಗುರು ಪರಂಪರೆಗೆ ನಾಡಿನ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ ಎಂದರು.
ಸಮಾರಂಭದಲ್ಲಿ 10 ಜನ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಶ್ಮಿ, ಹನುಮೇಶ್ ಪದಕಿ, ಬಿ.ಎನ್. ರಶ್ಮಿ, ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್, ಎಂ. ನಾಗರತ್ಮಮ್ಮ, ಸಿ.ಜಿ. ಶ್ರೀನಿವಾಸ, ಗಂಗಣ್ಣ, ದೇವಾನಂದ, ಶ್ರೀನಿವಾಸ, ಗಿರಿಯಪ್ಪ, ಜೆ.ಎಸ್. ಗುರುಮೂರ್ತಿ, ಬಿ.ಟಿ. ಲವಕುಮಾರ್, ಕಾಂತರಾಜು, ಕೆಂಚವೀರಪ್ಪ, ಶಶಿಕಿರಣ್ ಗುಡೇಕೋಟೆ, ರವೀಂದ್ರನಾಥ್, ರಘು, ಶ್ರೀಕಾಂತ್, ಜಯಪ್ಪ, ನಾಗಮ್ಮ ಇತರರು ಇದ್ದರು.
ಗುರು ಪರಮಾತ್ಮನ ಸ್ವರೂಪ
ಚಿತ್ರದುರ್ಗ: ಬ್ರಹ್ಮ, ರುದ್ರ, ಮಹಾ ವಿಷ್ಣುವೇ ಆಗಿರುವ ಪರಮಾತ್ಮನ ಸ್ವರೂಪ ಗುರುವನ್ನು ಅಚಲ ನಿಷ್ಠೆಯಿಂದ ನಂಬಿದರೆ ಸಕಲ ವರಗಳನ್ನು ದಯ ಪಾಲಿಸುವನು ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರು ಒಲಿದರೆ ಹರಿಹರರೂ ಪ್ರಸನ್ನರಾಗುವರು. ಗುರುಗಳ ಅನುಗ್ರಹವಿಲ್ಲದೆ ಯಾವ ಸಾಧನೆಯೂ ಆಗದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷೆ ಭಾಗ್ಯಲಕ್ಷ್ಮೀಮೂರ್ತಿ, ಕಾರ್ಯದರ್ಶಿ ಅನುರಾಧಾ, ರೋಟರಿ ಕ್ಲಬ್ ಚಿತ್ರದುರ್ಗ ಪೋರ್ಟ್‌ನ ಅಧ್ಯಕ್ಷ ಶಶಿಧರ ಗುಪ್ತಾ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಚಂದ್ರಕಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್ಷಾದ್ ಉನ್ನೀಸಾ ಇತರರಿದ್ದರು.
ರೋಟರಿ ಕ್ಲಬ್, ಚಿತ್ರದುರ್ಗ ಪೋರ್ಟ್ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುರಿ ಹಿಂದೆ ಇರಬೇಕು ಗುರು
ಚಿತ್ರದುರ್ಗ: ಜೀವನದಲ್ಲಿ ಗುರಿ ಇರಬೇಕು. ಆ ಗುರಿ ಹಿಂದೆ ಗುರು ಇರಬೇಕು. ಗುರು ಇಲ್ಲದೆ ಯಾವ ಸಾಧನೆ ಸಾಧ್ಯವಾಗದೆಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅಭಿಪ್ರಾಯಪಟ್ಟರು.
ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ನೀಲಕಂಠೇಶ್ವರ ದೇವಾಲಯದ ಸಮುದಾಯದ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದಲ್ಲಿ ಏಳಿಗೆಗೆ ಗುರುವಿನ ಮಾರ್ಗದರ್ಶನ ಬೇಕು. ಅದೇ ರೀತಿ ಗುರು ಆದವರಿಗೆ ಶಿಸ್ತು, ಸಂಯಮ, ಸಮಯ ಪಾಲನೆ, ಕಲಿಸುವ ವಿಷಯದಲ್ಲಿ ಆಸಕ್ತಿ ಹಾಗೂ ವಿಷಯ ಜ್ಞಾನ ಇರ ಬೇಕಾಗುತ್ತದೆ ಎಂದರು.
ಗುರು ಮತ್ತು ಪೂರ್ಣಿಮೆಯ ಔಚಿತ್ಯ ಕುರಿತು ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಉಪನ್ಯಾಸ ಮಾಡಿದರು. ಸಂಸ್ಥೆ ನಿರ್ದೇಶಕ ಟಿ.ವೀರಭದ್ರಸ್ವಾಮಿ,ಭಾವಸಾರ ಕ್ಷತ್ರಿಯ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷೆ ಮಮತಾ, ಪರಶುರಾಮ್ ಬೇದ್ರೆ ಇದ್ದರು. ಕೋಕಿಲಾ ರುದ್ರಮೂರ್ತಿ ಪ್ರಾರ್ಥಿಸಿದರು. ಸುನಿತಾಮುರುಳಿ ಸ್ವಾಗತಿಸಿ,ನಾಗಚೇತನ್ ವಂದಿಸಿದರು. ವಿಮಲಾಕ್ಷಿ ನಿರೂಪಿಸಿದರು.