ಜಿಲ್ಲೆ

ಸ್ವಾವಲಂಬನೆಗೆ ಜ್ಞಾನವಿಕಾಸ ಕೇಂದ್ರ ಸಹಕಾರಿ

ಬಸವರಾಜ ವೀರಪ್ಪ ಗರಗ

ನರೇಗಲ್ಲ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರಿಗೆ ಅವಶ್ಯ ಇರುವ ವಿಷಯದ ಜ್ಞಾನವನ್ನು ಜ್ಞಾನವಿಕಾಸ ಕೇಂದ್ರದಿಂದ ನೀಡಲಾಗುತ್ತದೆ ಎಂದು ಹೊಸಳ್ಳಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ ಹೇಳಿದರು.
ಸಮೀಪದ ಬೂದಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಹೊಸಳ್ಳಿ ವಲಯದ ಮಹಿಳಾ ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮದಡಿ ಶುಕ್ರವಾರ ಆಯೋಜಿಸಿದ್ದ ನೂತನ ಮಂಜುಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಧಗ್ರಾ ಯೋಜನೆಯ ಸಹಾಯಧನ ಪಡೆಯುವ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಬಲೀಕರಣದೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ರೋಣ ತಾಲೂಕಿನಲ್ಲಿ 2,600 ಸಂಘಗಳಲ್ಲಿ 25 ಜ್ಞ್ಞಾನ ವಿಕಾಸ ಕೇಂದ್ರಗಳಲ್ಲಿ ನಿಮ್ಮೂರಿನ ಹಲವಾರು ಸಂಘಗಳಲ್ಲಿ ನಿಮ್ಮ ಸಂಘ ಈಗ ಮಹಿಳಾ ಮಂಜುಶ್ರೀ ಜ್ಞ್ಞಾನವಿಕಾಸ ಕೇಂದ್ರದ ಸಂಘವೆಂದು ಆಯ್ಕೆಯಾಗಿದೆ. ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜ್ಞ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಮಠಪತಿ ಮಾತನಾಡಿ, ಮಹಿಳೆಯರು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು. ಆದರೆ, ಪ್ರೋತ್ಸಾಹ ನೀಡುವ ಕಾರ್ಯ ಪುರುಷರಿಂದ ಆಗಬೇಕಿದೆ. ಜ್ಞ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಜ್ಞಾನ ಹೆಚ್ಚಿಸುವುದರೊಂದಿಗೆ ಧೈರ್ಯ, ನಂಬಿಕೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷ ಸೋಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಗ್ರಾಪಂ ಸದಸ್ಯೆಯರಾದ ಚಂದ್ರಮ್ಮ ಬೆನಹಾಳ, ಉಮಾ ಚಿಗರಿ, ವೀರಪ್ಪಜ್ಜ ಚಿಗರಿ, ಭೀಮಪ್ಪ ಬೆನಹಾಳ, ಮಹಾದೇವಪ್ಪ ಕರಗಣ್ಣವರ ಇದ್ದರು. ಶ್ರಾವಣ ಮೊದಲ ಶುಕ್ರವಾರ 51 ಮುತೆôದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ರತ್ನಾ ಕುರಿ, ಕಮಲವ್ವ ಬೂಸಗತ್ತಿ ಹಾಗೂ ಶ್ವೇತಾ ಕರಗಣ್ಣವರ ನಿರ್ವಹಿಸಿದರು.