ಮುಳಬಾಗಿಲು ತಾಲೂಕು ಕಾಮನೂರು ಗ್ರಾಮದಲ್ಲಿ ಪ್ರಧಾನ ಮಂತ್ರಿ ಜಲಜೀವನ್​ ಮಿಷನ್​ ಯೋಜನೆಯಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಭೂಮಿಪೂಜೆ ನೆರವೇರಿಸಿದರು. ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ಮಾಜಿ ಸದಸ್ಯ ಡಾ.ಸಿ.ಎನ್​. ಪ್ರಕಾಶ್​ ಇದ್ದರು. 
ಜಿಲ್ಲೆ

ಜೆಜೆಎಂ ಕಾಮಗಾರಿಗೆ ಚಾಲನೆ

ಕೋಲಾರ ಡೆಸ್ಕ್

ಮುಳಬಾಗಿಲು: ಪ್ರಧಾನ ಮಂತ್ರಿ ಜಲಜೀವನ್​ ಮಿಷನ್​ ಯೋಜನೆಯಡಿ ಪ್ರತಿ ಗ್ರಾಮದ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಹಂತ ಹಂತವಾಗಿ ಅನುಷ್ಠ್ಠಾನಕ್ಕೆ ತರಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.


ಜೆಜೆಎಂ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಹಿನ್ನೆಲೆಯಲ್ಲಿ ತಾಲೂಕಿನ ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ಕಾಮನೂರು ಗ್ರಾಮದಲ್ಲಿ ಬುಧವಾರ ಪೈಪ್​ಲೈನ್​ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಈ ಯೋಜನೆಯಲ್ಲಿ ಮನೆಗಳಿಗೆ ನೀರು ಪೂರೈಕೆ ಬೇಡಿಕೆ ಎಷ್ಟಿದೆ ಎಂಬುದನ್ನು ಅಳೆಯಲು ಮೀಟರ್​ ಅಳವಡಿಸಲಾಗುತ್ತಿದೆ. ಇದನ್ನು ಕಾಂಗ್ರೆಸ್​ನವರು ವಿರೋಧಿಸುವ ಉದ್ದೇಶದಿಂದ ನೀರಿಗೆ ಮೀಟರ್​ ದರ ವಿಧಿಸುತ್ತಾರೆ ಎಂಬ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಮಾನ್ಯತೆ ನೀಡಬಾರದು. ಈ ಹಿಂದೆ ಎಷ್ಟು ನೀರಿನ ದರ ಪಾವತಿ ಮಾಡುತ್ತಿದ್ದರು ಅಷ್ಟೇ ಶುಲ್ಕ ಈಗಲೂ ಪಾವತಿ ಮಾಡಿದರೆ ಸಾಕು ಎಂದರು.


ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ತಾಪಂ ಮಾಜಿ ಸದಸ್ಯ ಡಾ.ಸಿ.ಎನ್​. ಪ್ರಕಾಶ್​, ಟಿಎಪಿಸಿಎಂಎಸ್​ ಮಾಜಿ ನಿರ್ದೇಶಕ ಎಂ.ಆರ್​.ನಾಗಭೂಷಣ್​ಬಾಬು, ಪಿಡಿಒ ಎಸ್​.ರಮೇಶ್​, ಮುಖಂಡರಾದ ಕೆ.ಎಂ.ಅಶ್ವತ್ಥಗೌಡ, ಕೆ.ಎಂ.ಸಂಜೀವಗೌಡ, ರವೀಂದ್ರ, ಶಿವ, ಕಮ್ಮದಟ್ಟಿ ನಾರಾಯಣಸ್ವಾಮಿ ಇದ್ದರು.