ಸಂಡೂರು ತಾಲೂಕು ಜೋಗ ಗ್ರಾಮದಲ್ಲಿ ಜೆಜೆಎಂ ಯೋಜನೆಯ ಪೈಪ್‌ಲೈನ್ ಕಾಮಗಾರಿ ವೇಳೆ ಅಗೆದಿರುವ ರಸ್ತೆಯನ್ನು ಮಹಿಳೆ ಮಣ್ಣು-ಕಲ್ಲು ಹಾಕಿ ಮುಚ್ಚುತ್ತಿರುವುದು. 
ಜಿಲ್ಲೆ

ಜೆಜೆಎಂ ಪೈಪ್‌ಲೈನ್ ಕಾಮಗಾರಿ ಕಳಪೆ

Kopala - Desk - Eraveni

ಸಂಡೂರು; ತಾಳೂರು ಗ್ರಾಪಂ ವ್ಯಾಪ್ತಿಯ ಜೋಗ ಗ್ರಾಮದಲ್ಲಿ ಜೆಜೆಎಂ ಯೋಜನೆ ಪೈಪ್‌ಲೈನ್ ಜೋಡಣೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿ ವೇಳೆ ನಿರ್ಮಾಣವಾದ ಗುಂಡಿಗಳನ್ನು ಗುತ್ತಿಗೆದಾರರು ಕಾಂಕ್ರಿಟ್ ಹಾಕಿ ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ಮಳೆ ಬಂದಾಗ ಮತ್ತಷ್ಟು ತಗ್ಗುಗಳಾಗಿವೆ. ಈ ಕಾರಣಕ್ಕೆ ಸಂಚಾರಕ್ಕೆ ತೊಂದರೆ ಆಗಿದೆ. ಮಳೆ ಬಂದಾಗ ನೀರು ನಿಂತು ತೀವ್ರ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥ, ಜೋಗಜೆ.ಎಂ.ಚನ್ನಬಸಯ್ಯಜೆಜೆಎಂ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಯನ್ನು ಮಹಿಳೆಯರೇ ಮಣ್ಣು, ಕಲ್ಲು ಹಾಕಿ ಮುಚ್ಚುತ್ತಿದ್ದಾರೆ. ಗುಂಡಿಗಳಿಂದಾಗಿ ಚಿಕ್ಕ ಓಣಿಗಳಲ್ಲಿ ಓಡಾಡಲು ಹಿಂಸೆಯಾಗುತ್ತಿದೆ. ಈ ಕುರಿತು ತಾಪಂ ಇಒ ಗಮನಕ್ಕೆ ತಂದಿದ್ದು, ಅವರು ಪಿಡಿಒಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಗುತ್ತಿಗೆದಾರರನ್ನು ಕರೆಸಿ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ತಾಪಂ ಇಒ, ಸಂಡೂರುಮಡಗಿನ ಬಸಪ್ಪಜೋಗ ಗ್ರಾಮದಲ್ಲಿ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇಗೆ ಸೂಚಿಸಿರುವೆ.