ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗೋವಾದಲ್ಲಿ ಆಯೋಜಿಸಿದ್ದ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೋ)ನ ಕೆಕೆಜಿ (ಕರ್ನಾಟಕ, ಕೇರಳ ಮತ್ತು ಗೋವಾ) ವಲಯ ಶೃಂಗಸಭೆಯಲ್ಲಿ ಜಿತೋ ಹುಬ್ಬಳ್ಳಿ ಶಾಖೆ 6 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸಂಪರ್ಕದಲ್ಲಿ ಉತ್ಕೃಷ್ಟತೆ, ಅತ್ಯುತ್ತಮ ಶಾಖೆ ವಿಭಾಗದಲ್ಲಿ ರನ್ನರ್ ಅಪ್, ಯುವ, ಯುವ ಸಂಪರ್ಕ, ಭರವಸೆಯ ಮಹಿಳೆಯರು ಹಾಗೂ ಮಹಿಳಾ ಶಾಖೆ ಸಂಪರ್ಕ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗಳಿಸಿದೆ.
ಶೃಂಗಸಭೆಯಲ್ಲಿ ಹುಬ್ಬಳ್ಳಿಯು ಅತ್ಯಧಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಶಾಖೆಯಾಗಿ ಹೊರಹೊಮ್ಮಿದೆ. ಜಿತೋ ಅಪೆಕ್ಸ್ ಅಧ್ಯಕ್ಷ ಸುಖರಾಜ್ ನಹರ್, ಅಧ್ಯಕ್ಷ ಕಾಂತಿಲಾಲ್ ಓಸ್ವಾಲ್, ಉಪಾಧ್ಯಕ್ಷ ಖುಸಲ್ರಾಜ್ ಬನ್ಸಾಲಿ, ಕೆಕೆಜಿ ಅಧ್ಯಕ್ಷ ಅಶೋಕ ಸಾಲೇಚಾ, ಉಪಾಧ್ಯಕ್ಷ ಪ್ರವೀಣ್ ಬಾಫ್ನಾ, ಮುಖ್ಯ ಕಾರ್ಯದರ್ಶಿ ದಿಲೀಪ ಜೈನ್, ಜಿತೋ ಹುಬ್ಬಳ್ಳಿ ಅಧ್ಯಕ್ಷ ಅನಿಲ್ ಕುಮಾರ್ ಜೈನ್, ಇತರರು ಸಂಘಟನೆಯಲ್ಲಿ ಇದ್ದಾರೆ.