ಜಿಲ್ಲೆ

ಜೀತೋದಿಂದ ವೃಕ್ಷಾರೋಪಣ

Dharwada - Basavaraj Idli

ಹುಬ್ಬಳ್ಳಿ: ಜೈನ್ ಇಂಟರನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ ಹುಬ್ಬಳ್ಳಿ ಶಾಖೆ (ಜೀತೋ) ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಶ್ವಾಪುರದ ಅರಿಹಂತ ಸೊಸೈಟಿ ಗಾರ್ಡನ್ ನಲ್ಲಿ ಬುಧವಾರ ವೃಾರೋಪಣ ಅಭಿಯಾನ ಆಯೋಜಿಸಲಾಗಿತ್ತು.

ಗಾರ್ಡನ್ ನಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಜೀತೋ ಹಿಂದಿನ ಅಧ್ಯಕ್ಷ ಭವರಲಾಲ್ ಸಿ. ಜೈನ್, ಮುಖ್ಯ ಕಾರ್ಯದರ್ಶಿ ಭರತ ಪಟವಾರಿ, ಚೇತನ್ ನಹತಾ, ಶರದ್ ಮೊಮಯಾ, ದಿಲೀಪ ಮುನೋತ್, ವೈ.ಬಿ. ಪಾಟೀಲ, ಪ್ರವಿಣ ಚೌಧರಿ, ರಾಜನ್ ಜೈನ್, ಬಾಹುಬಲಿ ಜೈನ್, ರಿನೀಶ್ ಜೈನ್, ಇತರರು ಇದ್ದರು.