ಜಿಲ್ಲೆ

ಜಿತೋದಿಂದ ದಿವಾಸ್ ಲೀಗ್ ಸ್ಪರ್ಧೆ ಆಯೋಜನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಜಿತೋ ಚಾಪ್ಟರ್ ಉಪಕ್ರಮದಲ್ಲಿ ಜಿತೋ ಗದಗ ಲೇಡೀಸ್ ವಿಂಗ್ ನಿಂದ ಜಿತೋ ದಿವಾಸ್ ಲೀಗ್ ಆಯೋಜಿಸಲಾಗಿತ್ತು.

ಕುಂದನ್ ಜುವೆಲ್ಲರ್ಸ್ ಪ್ರಾಯೋಜಕತ್ವ ಮತ್ತು ವಿಮಲ್ ರೆಸಾರ್ಟ್ಸ್ ಸಹ ಪ್ರಾಯೋಜಕತ್ವದಲ್ಲಿ ಗದಗನ ವಿಮಲ್ ರೆಸಾರ್ಟ್ಸ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವು ಕ್ರೀಡಾ ಪ್ರೇಮಕ್ಕೆ ಒತ್ತು ನೀಡಿತು. ಕರ್ನಾಟಕದಾದ್ಯಂತ ಆರು ತಂಡಗಳು ಸ್ಪರ್ಧಿಸಿದ್ದವು. ಲೀಗ್ ಗದಗ ಮಹಿಳಾ ವಿಭಾಗದ ಅಧ್ಯಕ್ಷರು ತಂಡವನ್ನು ಸ್ವಾಗತಿಸಿದರು. ಜಿತೋ ಹುಬ್ಬಳ್ಳಿ ಚಾಪ್ಟರ್ ಅಧ್ಯಕ್ಷರು ಸ್ಫೂರ್ತಿದಾಯಕ ಮಾತುಗಳಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.

ಸಂಚಾಲಕರಾದ ಮೀನಾಕ್ಷಿ ಗಡಿಯಾ ಮತ್ತು ಕವಿತಾ ಗಡಿಯಾ ಕಾರ್ಯಕ್ರಮ ನಿರ್ವಹಿಸಿದರು.
ಭರತ್ ಪಟ್ವಾರಿ, ಪಿಂಕಿ ಜೈನ್, ಇಂದಿರಾ ಬಾಗ್ಮಾರ್, ರಾಜನ್ ಜೈನ್, ಗೀತಾ ಚೆಡ್ಡಾ, ಜೀತೇಂದ್ರ ಬನ್ಸಾಲಿ, ಮೋಹಿತ್ ಕವಾಡ್, ಶುಭಂ ಧೂಮಾವತ್, ವಿನಯ್ ಜೈನ್, ನಿಯತಿ ಬನ್ಸಾಲಿ ಉಪಸ್ಥಿತರಿದ್ದರು.